ಅವಧಿಗೂ ಮೊದಲೇ ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ: ರೈತರು ಫುಲ್ ಖುಷ್
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ ಕೆಲಸ ಅವಧಿಗೂ ಮುನ್ನ ಪೂರ್ಣಗೊಂಡಿದೆ. 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ. ಡ್ಯಾಂನ 12 ಗೇಟ್ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್ಗಳ ಪರೀಕ್ಷೆ ಮಾಡಬೇಕಿದೆ. ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.
ಕೊಪ್ಪಳ, ಏಪ್ರಿಲ್ 26: ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಗದಿತ ಸಮಯಕ್ಕೂ ಮೊದಲೇ ಪೂರ್ಣಗೊಂಡಿದೆ. ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 8 ದಶಕಗಳ ನಂತರ 33 ಗೇಟ್ ಬದಲಾವಣೆ ಮಾಡಲಾಗಿದೆ. 2024ರ ಆಗಸ್ಟ್ 10ರಂದು ಜಲಾಶಯದ 19ನೇ ಗೇಟ್ ಕಿತ್ತು ಹೋಗಿತ್ತು. ತಜ್ಞರ ಸಲಹೆಯ ಮೇರೆಗೆ ಜಲಾಶಯದ ಎಲ್ಲಾ ಗೇಟ್ಗಳ ಬದಲಾವಣೆ ಮಾಡಲಾಗಿದೆ. ಟಿ.ಬಿ.ಡ್ಯಾಂನ 12 ಗೇಟ್ಗಳ ಇಳಿಸುವ, ಏರಿಸುವ ಪರೀಕ್ಷೆ ಪೂರ್ಣವಾಗಿದ್ದು, ಉಳಿದ ಗೇಟ್ಗಳ ಪರೀಕ್ಷೆ ಮಾಡಬೇಕಿದೆ. ಮೇ ಅಂತ್ಯಕ್ಕೆ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಇದೀಗ ಅವಧಿಗೂ ಮೊದಲೇ ಕಾಮಗಾರಿ ಮುಗಿದಿದ್ದರಿಂದ ರೈತರು ಸಂತಸಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
