ಹುಬ್ಬಳ್ಳಿ ಟಿವಿ9 ಎಜುಕೇಶನ್ ಎಕ್ಸ್​ಪೋ; ಸಿಎ ಕೋರ್ಸ್ ಬಗ್ಗೆ ವಿನಾಕಾರಣ ಆತಂಕ ಬೇಡ: ರಿಷಭ್ ಉಪಾಧ್ಯಾಯ, ಐಸಿಎಐ

Updated on: Apr 26, 2025 | 5:35 PM

ರಿಷಭ್ ಹೇಳುವ ಪ್ರಕಾರ ಸಿಎ ನಿಸ್ಸಂದೇಹವಾಗಿ ಕಷ್ಟದ ಕೋರ್ಸ್​ ಅಲ್ಲ, ವಿದ್ಯಾರ್ಥಿಗಳಲ್ಲಿ ವಿನಾಕಾರಣ ಆತಂಕ ಮನೆ ಮಾಡಿರುತ್ತದೆ, ಸಮರ್ಪಣಾ ಮನೋಭಾವದ ಓದು ಮತ್ತು ಪ್ರಯತ್ನಶೀಲತೆ ಇದ್ದರೆ ಸಿಎಯನ್ನು ಸುಲಭವಾಗಿ ಕ್ರ್ಯಾಕ್ ಮಾಡಬಹುದು ಎಂದು ಅವರು ಹೇಳುತ್ತಾರೆ. ವಿಶ್ವದ ಅತಿದೊಡ್ಡ ಸಂಸ್ಥೆಯೆನಿಸಿಕೊಂಡಿರುವ ಐಸಿಎಐ ಹುಬ್ಬಳ್ಳಿ ಶಾಖೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉತ್ಸುಕವಾಗಿದೆ ಎಂದು ಅವರು ಹೇಳುತ್ತಾರೆ.

ಹುಬ್ಬಳ್ಳಿ, ಏಪ್ರಿಲ್ 26: ಬೆಂಗಳೂರು ಮತ್ತು ಕಲಬುರಗಿಯ ನಂತರ ಇಂದಿನಿಂದ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್ಸ್ ನಲ್ಲಿ ಟಿವಿ9 ಎಜುಕೇಶನ್ ಎಕ್ಸ್​​ಪೋ (Tv9 Education Expo) ಶುರುವಾಗಿದೆ. ಈಗಾಗಲೇ ವರದಿಯಾಗಿರುವಂತೆ ಹುಬ್ಬಳ್ಳಿ-ಧಾರವಾದ ಮಹಾನಗರ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಎಕ್ಸ್​​ಪೋ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾಲುದಾರ ಆಗಿರುವ ದಿ ಇನ್​ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯ ಸಂಸ್ಥೆಯ (ಐಸಿಎಐ) ಉಪಾಧ್ಯಕ್ಷರಾಗಿರುವ ರಿಷಭ್ ಜಿ ಉಪಾಧ್ಯಾಯ (Rishabh G Upadhyay) ಸಿಎ ಕೋರ್ಸ್​ ವ್ಯಾಸಂಗ ಮಾಡಬೇಕೆನ್ನುವವರಿಗೆ ಉಪಯುಕ್ತ ಮಾಹಿತಿ ನೀಡಿದರು.

ಇದನ್ನೂ ಓದಿ:  ವಿದ್ಯಾರ್ಥಿಗಳ ಎಲ್ಲ ಗೊಂದಲಗಳಿಗೆ ಪರಿಹಾರ ಸಿಗುವ ಎಜುಕೇಶನ್ ಎಕ್ಸ್​ಪೋ ಟಿವಿ9 ಆಯೋಜಿಸಿದೆ: ಹೆಚ್ ಪ್ರಸನ್ನ, ಸಿಇಒ, ಕೆಇಎ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ