ದರ್ಶನ್ ತೂಗುದೀಪ: ಬೆಂಗಳೂರು-ಬಳ್ಳಾರಿವರೆಗೆ ಪೊಲೀಸ್ ವ್ಯಾನಲ್ಲಿ ಪ್ರಯಾಣ ಹೇಗಿತ್ತು? ಇಲ್ಲಿದೆ ವಿವರಣೆ
Darshan Toogudeepa: ಪೊಲೀಸರು ಮಾಧ್ಯಮ ಮತ್ತು ಬೆಂಗಳೂರುನಿಂದ ಬಳ್ಳಾರಿವರೆಗೆ ರಸ್ತೆಯುದ್ದಕ್ಕೂ ನೆರೆದಿರಬಹುದಾದ ಅಭಿಮಾನಿಗಳ ಕಣ್ತಪ್ಪಿಸಲು ಮೊದಲಿಗೆ ನಿಶ್ಚಯಿಸಿದ್ದ ಅಥವಾ ಯೋಜಿಸಿದ್ದ ಮಾರ್ಗ ಬಿಟ್ಟು ದೇವನಹಳ್ಳಿ ವಿಮಾನ ನಿಲ್ದಾಣ, ಚಿಕ್ಕಬಳ್ಳಾಪುರ, ಜೋಳದ ರಾಶಿ ಮತ್ತು ಅನಂತಪುರ ಮೂಲಕ ಬಳ್ಳಾರಿ ತಲುಪಿದರು ಎಂದು ವರದಿಗಾರ ಹೇಳುತ್ತಾರೆ.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂಬರ್ 2 ಅಗಿರುವ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ. ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಳ್ಳಾರಿಯ ಜೈಲಿಗೆ ಕರೆತಂದ ಸುಮಾರು 6 ಗಂಟೆಗಳ ಪ್ರಯಾಣದ ಬಗ್ಗೆ ಪೊಲೀಸ್ ವ್ಯಾನನ್ನು ಹಿಂಬಾಲಿಸಿಕೊಂಡು ಹೋದ ನಮ್ಮ ವರದಿಗಾರ ಬಳ್ಳಾರಿ ಸೆಂಟ್ರಲ್ ಜೈಲಿನ ಹೊರಭಾಗದಿಂದ ವಿವರಣೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ತೂಗುದೀಪ: ಬಳ್ಳಾರಿ ಜೈಲಿಗೆ ಕೊಲೆ ಆರೋಪಿ ದಾಸನ ಎಂಟ್ರಿ ಹೇಗಿತ್ತು ನೋಡಿ