ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ತನಿಖೆ ವೇಳೆ ಅಚ್ಚರಿಯ ಅಂಶ ಬಯಲಿಗೆ
ಪ್ರಧಾನಿ ಮೋದಿ ಸಾಗಿದ ಮಾರ್ಗದಲ್ಲಿ ಪತ್ತೆಯಾದದ್ದು ಜಿಲೆಟಿನ್ ಕಡ್ಡಿಗಳಲ್ಲ, ಅಮೋನಿಯಂ ನೈಟ್ರೇಟ್ ಜೆಲ್ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಧಾನಿ ಭೇಟಿಯನ್ನು ತಡೆಯುವ ಉದ್ದೇಶದಿಂದ ಭಯದ ವಾತಾವರಣ ಸೃಷ್ಟಿಸಲು ಈ ಕೃತ್ಯ ನಡೆದಿದೆ. 11 ಗಂಟೆಗಳ ಕಾಲ ಪೊಲೀಸರು ಇಲ್ಲದ ಸಮಯದಲ್ಲಿ ಸ್ಫೋಟಕ ಇಡಲಾಗಿದ್ದು, ಸಿಸಿಟಿವಿ ಇಲ್ಲದೆ ತಾಂತ್ರಿಕ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಬೆಂಗಳೂರು, ಮೇ 16: ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಪತ್ತೆಯಾದ ವಸ್ತುವಿನ ಕುರಿತು ಪೊಲೀಸರ ತನಿಖೆಯಿಂದ ಹೊಸ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಜಿಲೆಟಿನ್ ಕಡ್ಡಿಗಳು ಎಂದು ಭಾವಿಸಲಾಗಿದ್ದರೂ, ಇದು ಅಮೋನಿಯಂ ನೈಟ್ರೇಟ್ ಜೆಲ್ ಎಂದು ದೃಢಪಟ್ಟಿದೆ. ಅಮೋನಿಯಂ ನೈಟ್ರೇಟ್ ಎಂಬುದು ಸ್ಪೋಟಕಗಳಲ್ಲಿ ಬಳಸುವ ಅಪಾಯಕಾರಿ ವಸ್ತುವಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯು ಮೇ 9ರ ರಾತ್ರಿ 8:05 ರಿಂದ ಮೇ 10ರ ಬೆಳಗ್ಗೆ 7:00 ಗಂಟೆಯ ನಡುವೆ, ಅಂದರೆ ಸುಮಾರು 11 ಗಂಟೆಗಳ ಅವಧಿಯಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಸ್ಥಳದಲ್ಲಿ ಪೊಲೀಸರ ಗಸ್ತು ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೂಡ ಇಲ್ಲದಿರುವುದು ತನಿಖೆಗೆ ಸವಾಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತಾಂತ್ರಿಕ ವಿಶ್ಲೇಷಣೆಗಳನ್ನು ಅವಲಂಬಿಸಿದ್ದಾರೆ. ಸ್ಪೋಟಕಕ್ಕೆ ಯಾವುದೇ ಡಿಟೋನೇಟರ್‌ಗಳು ಸಿಗದ ಕಾರಣ, ಸ್ಫೋಟದ ಸಾಧ್ಯತೆ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಫುಟ್ಪಾತ್ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ

