ಚಾಂಪಿಯನ್ ಆರ್​ಸಿಬಿ ತಂಡದ ಆಟಗಾರರನ್ನು ಹೆಚ್​ಎಎಲ್ ನಿಂದ ಕರೆತರಲು ವಿಶೇಷ ಬಸ್ಸುಗಳು ಸಿದ್ಧ

Updated on: Jun 04, 2025 | 2:29 PM

ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದಿಂದ ಸತ್ಕಾರದ ಬಳಿಕ ಆಟಗಾರರನ್ನು ಅಲ್ಲಿಂದ ಸುಮಾರು 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಬದಲು ಬಸ್​​ಗಳಲ್ಲಿ ಕರೆತರಲಾಗುವುದು. ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ನೆಚ್ಚಿನ ತಂಡದ ಆಟಗಾರರನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಗಲಿದೆ. ನಗರದ ನಿವಾಸಿಗಳು ಚಾನ್ಸ್ ಮಿಸ್ ಮಾಡ್ಕೊಳ್ಳೋದು ಬೇಡ.

ಬೆಂಗಳೂರು, ಜೂನ್ 4: ಈ ಎರಡು ಬಸ್​ಗಳನ್ನು ಗಮನಿಸಿ ಮಾರಾಯ್ರೇ, ಇವು ಖಂಡಿತವಾಗಿಯೂ ಸಾಮಾನ್ಯ ಬಸ್​ಗಳಲ್ಲ, ಇಂದು ಗುಜರಾತಿನ ಅಹಮದಾಬಾದ್​ನಿಂದ ನಗರಕ್ಕೆ ಆಗಮಿಸಲಿರುವ ಐಪಿಎಲ್ ಚಾಂಪಿಯನ್ಸ್ ಬೆಂಗಳೂರು ರಾಯಲ್ ಚಾಲೆಂಜರ್ಸ್ (Royal Challengers Bengaluru) ತಂಡದ ಸದಸ್ಯರನ್ನು ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ವಿಧಾನ ಸೌಧಕ್ಕೆ ಕರೆತರಲು ಅಣಿಯಾಗಿರುವ ಬಸ್​ಗಳಿವು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಮಧ್ಯಾಹ್ನ 1.30 ಕ್ಕೆ ಆರ್​ಸಿಬಿ ಆಟಗಾರರನ್ನು ಹೊತ್ತ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಅಗಲಿದೆ. ಅಟಗಾರರು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 5 ಗಂಟೆಗೆ ಭೇಟಿಯಾಗಲಿದ್ದಾರೆ ಮತ್ತು ಅಲ್ಲೇ ಆಟಗಾರರನ್ನು ಸತ್ಕರಿಸಲಾಗುವುದು.

ಇದನ್ನೂ ಓದಿ:   ಕಪ್ ಗೆದ್ದು ಕೊಡ್ತೀನಿ… RCB ಅಭಿಮಾನಿಗಳ ಮುಂದಿಟ್ಟ ಶಪಥ ಈಡೇರಿಸಿದ ಕೃನಾಲ್ ಪಾಂಡ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 04, 2025 01:37 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More