AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Apr 29, 2026 | 12:50 PM

Share

ವಿದ್ಯುತ್​​ ತಂತಿ ತಗುಲಿ ಏಪ್ರಿಲ್ 24ರಂದು ಮಾವಿನಕಾಯಿ ಕೀಳಲು ಹೋದ ಸಿಬ್ಬಂದಿ ಸಾವಿನ ನಂತರ ಉಡುಪಿ ಡಿಸಿ ಕಚೇರಿ ಆವರಣದಲ್ಲಿರುವ 10ಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆದಿದೆ. ವಿದ್ಯುತ್ ತಂತಿ ಶಿಫ್ಟ್ ಮಾಡುವ ಬದಲು ಹಣ್ಣು ನೀಡುತ್ತಿದ್ದ ಮರಗಳನ್ನೇ ಕಡಿದ ಜಿಲ್ಲಾಡಳಿತದ ವಿರುದ್ಧ ಪರಿಸರ ಹೋರಾಟಗಾರರಿಂದ ಆಕ್ರೋಶ ವ್ಯಕ್ತವಾಗಿದೆ. ಮರಗಳನ್ನು ರಕ್ಷಿಸಬೇಕಿದ್ದ ಅಧಿಕಾರಿಗಳೇ ಅವುಗಳಿಗೆ ಕೊಡಲಿಯೇಟು ಹಾಕಿಸಿದ್ದಾರೆ ಎಂದು ಸ್ಥಳೀಯರು ಕಿಡಿ ಕಾರಿದ್ದಾರೆ.

ಉಡುಪಿ, ಏಪ್ರಿಲ್​​ 29: ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿಯೇ ಹತ್ತಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆದಿದೆ. ಏ.24ರಂದು ಮಾವಿನ ಕಾಯಿ ಕೀಳುವಾಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೃತಪಟ್ಟಿದ್ದರು. ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿದ ಕಾರಣ ಪ್ರಾಣ ಬಿಟ್ಟಿದ್ದರು. ಆದರೆ ಇದೀಗ ನೆಗಡಿ ಆಯ್ತು ಎಂದು ಉಡುಪಿ ಜಿಲ್ಲಾಡಳಿತ ಮೂಗನ್ನೇ ಕತ್ತರಿಸಿಕೊಂಡಿದೆ. ವಿದ್ಯುತ್‌ ತಂತಿಯನ್ನು ಬೇರೆಡೆಗೆ ಶಿಫ್ಟ್‌ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ತಂತಿ ವರ್ಗಾವಣೆ ಬದಲು ಹಲವು ವರ್ಷಗಳಿಂದ ಹಣ್ಣು ನೀಡುತ್ತಿದ್ದ ಮರಗಳಿಗೇ ಕೊಡಲಿಯೇಟು ನೀಡಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕೂರುವ ಕೊಠಡಿ ಹೊರಭಾಗದಲ್ಲಿದ್ದ ಬೃಹದಾದ ಮರಗಳು ಪಕ್ಷಿಗಳಿಗೆ ಆಶ್ರಯತಾಣವೂ ಆಗಿತ್ತು. ಹೀಗಾಗಿ ಜಿಲ್ಲಾಡಳಿತದ ಕ್ರಮಕ್ಕೆ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Apr 29, 2026 12:50 PM
Follow Us