Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ತುಲಾ ರಾಶಿಯವರ ಸಮಗ್ರ ಭವಿಷ್ಯ ಮತ್ತು ಪರಿಹಾರಗಳು

Updated on: Mar 19, 2026 | 12:00 PM

2026ರ ಯುಗಾದಿ ತುಲಾ ರಾಶಿಯವರಿಗೆ ಸಮತೋಲನದ ವರ್ಷವಾಗಲಿದೆ. ಉದ್ಯೋಗ, ವ್ಯಾಪಾರದಲ್ಲಿ ಉತ್ತಮ ಪಾಲುದಾರಿಕೆ, ಆದಾಯದಲ್ಲಿ ಸಮತೋಲನ, ಕುಟುಂಬದಲ್ಲಿ ಅನ್ಯೋನ್ಯತೆ ಹೆಚ್ಚಲಿದೆ. ಆರೋಗ್ಯದಲ್ಲಿ ಬೆನ್ನುನೋವು ಕುರಿತು ಎಚ್ಚರಿಕೆ ಅಗತ್ಯ. ರಾಹು ಮತ್ತು ಇತರ ಗ್ರಹಗಳ ಪ್ರಭಾವ ವಿವರಿಸಲಾಗಿದೆ. ದೋಷ ನಿವಾರಣೆಗೆ ಪರಿಹಾರಗಳು ಮತ್ತು ಶುಭ ದಿನಾಂಕಗಳನ್ನು ಕೆ. ವೆಂಕಟೇಶ್ ಶರ್ಮಾ ಅವರು ತಿಳಿಸಿದ್ದಾರೆ.

2026ರ ಯುಗಾದಿ ತುಲಾ ರಾಶಿಯವರಿಗೆ ಸಮತೋಲನದ ವರ್ಷವಾಗಿರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ. ಆದಾಯ ಮತ್ತು ಖರ್ಚು ಸಮನಾಗಿರುವುದರಿಂದ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬ ಮತ್ತು ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ. ಕಳೆದ ವರ್ಷದ ಕಲಹಗಳು ದೂರವಾಗಿ ಸಂಬಂಧಗಳಲ್ಲಿ ಸಾಮರಸ್ಯ ಮೂಡಲಿದೆ.

ಆರೋಗ್ಯದ ವಿಷಯದಲ್ಲಿ ಬೆನ್ನುನೋವು ಕುರಿತು ಎಚ್ಚರ ವಹಿಸುವುದು ಅಗತ್ಯ. ಐದನೇ ರಾಹುವಿನ ಪ್ರಭಾವದಿಂದ ಕಷ್ಟಪ್ರಾಪ್ತಿಯಾಗುವ ಸಾಧ್ಯತೆಗಳಿದ್ದು, ಇದನ್ನು ನಿವಾರಿಸಲು ಸ್ವಾತಿ ನಕ್ಷತ್ರದ ದಿನ ಬೆಲ್ಲದ ಅಥವಾ ನಿಂಬೆಹಣ್ಣಿನ ದೀಪ ಹಚ್ಚುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಆರನೇ ಕುಜ, ಬುಧ ಮತ್ತು ಶನಿ ಗ್ರಹಗಳು ಲಕ್ಷ್ಮೀಕರರಾಗಿರುವುದರಿಂದ ಧನಲಾಭವಾಗುವ ಸೂಚನೆಗಳಿವೆ. ದೋಷ ಪರಿಹಾರಕ್ಕಾಗಿ ಹಿಮಕುಂದಮೃಣಾಲಾಭಂ ಶ್ಲೋಕ ಪಠಣ ಹಾಗೂ ಶುಕ್ರಾಯ ನಮಃ ಜಪದಿಂದ ಶುಭ ಫಲಗಳನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us