ನವೀನ್ ಪಾರ್ಥೀವ ಶರೀರವನ್ನು ಯುದ್ಧ ನಿಲ್ಲದ ಹೊರತು ಭಾರತಕ್ಕೆ ತರುವುದು ಸಾಧ್ಯವಿಲ್ಲ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿನಿ

ನವೀನ್ ಪಾರ್ಥೀವ ಶರೀರವನ್ನು ಯುದ್ಧ ನಿಲ್ಲದ ಹೊರತು ಭಾರತಕ್ಕೆ ತರುವುದು ಸಾಧ್ಯವಿಲ್ಲ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿನಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 05, 2022 | 4:24 PM

ನವೀನ್ ಅವರು ಶೆಲ್ಲಿಂಗ್ ಗೆ ಬಲಿಯಾದಾಗ ಖಾರ್ಕಿವ್ ನಲ್ಲಿದ್ದ ಬೇರೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಸತ್ತಿದ್ದು ಯಾರು ಅಂತ ಮೊದಲು ಗೊತ್ತಾಗಿರಲಿಲ್ಲ, ಒಬ್ಬ ಸೀನಿಯರ್ ಸ್ಟೂಡೆಂಟ್, 4ನೇ ವರ್ಷದ ವಿದ್ಯಾರ್ಥಿ ಅನ್ನುವ ಸಂಗತಿ ಮಾತ್ರ ಗೊತ್ತಾಗಿತ್ತ್ತಂತೆ.

ಉಕ್ರೇನಿಂದ ಶನಿವಾರವೂ ಭಾರತೀಯರು ದೆಹಲಿಗೆ ವಾಪಸ್ಸಾಗಿದ್ದು ಅವರಲ್ಲಿ ಕನ್ನಡಿಗರು (Kannadigas) ಸೇರಿದ್ದಾರೆ. ಟಿವಿ9 ದೆಹಲಿ ವರದಿಗಾರ ಹರೀಷ್ ಅವರು ಕೆಲವರೊಂದಿಗೆ ಮಾತಾಡಿದರು. ಈ ವಿಡಿಯೋನಲ್ಲಿ ವಿದ್ಯಾರ್ಥಿನಿ 5 ದಿನಗಳ ಹಿಂದೆ ಉಕ್ರೇನಲ್ಲಿ ಮೃತಪಟ್ಟ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyangoudar) ಅವರ ಬಗ್ಗೆ ಬಹಳ ಆದರ ಮತ್ತು ಭಾವುಕತೆಯಿಂದ ಮಾತಾಡುತ್ತಾರೆ. ಅವರಿಗೆ ನವೀನ್ ಒಬ್ಬ ದೊಡ್ಡಣ್ಣನ ಹಾಗೆ ಸಹಾಯ ಮಾಡುತ್ತಾ ಮಾರ್ಗದರ್ಶನ (guidance) ನೀಡುತ್ತಿದ್ದರಂತೆ. ಇವರು ಮಾತ್ರ ಅಲ್ಲ ಕನ್ನಡದ ಎಲ್ಲ ವಿದ್ಯಾರ್ಥಿಗಳಿಗೆ ನವೀನ್ ಮುಕ್ತ ಮನಸ್ಸಿನಿಂದ ನೆರವಾಗುತ್ತಿದ್ದರು, ಹೆಚ್ಚಿನನ ಸಮಯವನ್ನು ಲೈಬ್ರರಿಯಲ್ಲಿ ಕಳೆಯುತ್ತಿದ್ದ ಅವರನ್ನು ಸುಲಭವಾಗಿ ಅಪ್ರೋಚ್ ಮಾಡಬಹುದಿತ್ತು ಎಂದು ವಿದ್ಯಾರ್ಥಿನಿ ಹೇಳುತ್ತಾರೆ. ಲೈಬ್ರರಿ ಸಾಯಂಕಾಲ 7 ಗಂಟೆಯವರೆಗೆ ತೆರೆದಿರುತ್ತದೆ, ಅಲ್ಲಿಗೆ ಬಂದು ಓದುವಂತೆ ಅವರು ಹೇಳುತ್ತಿದ್ದರಂತೆ. ನವೀನ್ ಸಾವು ಬಿಟ್ಟರೆ ರಷ್ಯನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅವರು ಹೇಳುತ್ತಾರೆ.

ನವೀನ್ ಅವರು ಶೆಲ್ಲಿಂಗ್ ಗೆ ಬಲಿಯಾದಾಗ ಖಾರ್ಕಿವ್ ನಲ್ಲಿದ್ದ ಬೇರೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಸತ್ತಿದ್ದು ಯಾರು ಅಂತ ಮೊದಲು ಗೊತ್ತಾಗಿರಲಿಲ್ಲ, ಒಬ್ಬ ಸೀನಿಯರ್ ಸ್ಟೂಡೆಂಟ್, 4ನೇ ವರ್ಷದ ವಿದ್ಯಾರ್ಥಿ ಅನ್ನುವ ಸಂಗತಿ ಮಾತ್ರ ಗೊತ್ತಾಗಿತ್ತ್ತಂತೆ. ಖಾರ್ಕಿವ್ ನಲ್ಲಿರುವ ಕನ್ನಡದ ವಿದ್ಯಾರ್ಥಿಗಳು ಒಂದು ವಾಟ್ಸ್ಯಾಪ್ ಗ್ರೂಪ್ ಮಾಡಿಕೊಂಡಿದ್ದು ಅದರ ಮೂಲಕವೇ ಎಲ್ಲರಿಗೂ ಅವರ ಮರಣದ ವಿಷಯ ಗೊತ್ತಾಗಿ ತುಂಬಾ ವ್ಯಥೆಪಟ್ಟರು ಎಂದು ಅವರು ಹೇಳುತ್ತಾರೆ.

ಈ ವಿದ್ಯಾರ್ಥಿನಿ ಹೇಳುವ ಹಾಗೆ ನವೀನ್ ದೇಹವನ್ನು ಅವರ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿಡಲಾಗಿದೆ, ಯುದ್ಧ ನಿಲ್ಲದ ಹೊರತು ಅದನ್ನು ಭಾರತಕ್ಕೆ ತರುವುದು ಸಾಧ್ಯವಾಗುವುದಿಲ್ಲ. ವಾರ್ ಜೋನ್ ನಿಂದ ಯಾರನ್ನೂ ಇವ್ಯಾಕ್ಯುಯೇಷನ್ ಮಾಡುವುದು ಸಾಧ್ಯವಿಲ್ಲ, ಹಾಗಾಗಿ ಯುದ್ಧ ನಿಲ್ಲುವವರೆಗೆ ಕಾಯುವುದು ಅನಿವಾರ್ಯ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ