ಮಕ್ಕಳಲ್ಲಿ ಸಮಾನತೆಯ ಭಾವ ಮೂಡಿಸಲು ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ, ನ್ಯಾಯಾಲಯದ ಆದೇಶ ಸ್ವಾಗತಿಸುತ್ತೇನೆ: ತಾರಾ

ಮಕ್ಕಳಲ್ಲಿ ಸಮಾನತೆಯ ಭಾವ ಮೂಡಿಸಲು ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ, ನ್ಯಾಯಾಲಯದ ಆದೇಶ ಸ್ವಾಗತಿಸುತ್ತೇನೆ: ತಾರಾ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2022 | 7:35 PM

ಇಡೀ ವಿಶ್ವದಲ್ಲಿ ಸರ್ವಧರ್ಮ ಸಹಿಷ್ಣು ದೇಶವೆಂದರೆ ಭಾರತ ಮಾತ್ರ. ಬೇರೆ ದೇಶಗಳೆಲ್ಲ ತಾವು ಆಚರಿಸುವ ಧರ್ಮವನ್ನು ಮಾತ್ರ ಪ್ರತಿಪಾದಿಸುತ್ತವೆ. ಬೇರೆ ಧರ್ಮಗಳಿಗೆ ಅಲ್ಲಿ ಅವಕಾಶವಿರೋದಿಲ್ಲ. ಆದರೆ ನಮ್ಮ ದೇಶದಲ್ಲಿ ಮಾತ್ರ ಎಲ್ಲ ಧರ್ಮಗಳು ಸಮಾನ ಮತ್ತು ನಮ್ಮ ಧರ್ಮದ ಕಟ್ಟುಪಾಡುಗಳನ್ನು ಆಚರಿಸಲು ನಾವು ಸ್ವತಂತ್ರರು ಎಂದು ತಾರಾ ಹೇಳಿದರು.

ಬೆಂಗಳೂರು: ಕನ್ನಡದ ಖ್ಯಾತ ನಟಿ ಮತ್ತು ವಿಧಾನ ಪರಿಷತ್ ಸದಸ್ಯೆ ತಾರಾ (Tara) ಅವರು ಹಿಜಾಬ್ ವಿವಾದ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ (High Court) ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದು ಸಮಾನತೆಯ (equality) ಪ್ರತೀಕವಾಗಿದೆ, ಜಾತಿ-ಧರ್ಮ, ಬಡವ-ಬಲ್ಲಿದ ಅಂತ ಮಕ್ಕಳಲ್ಲಿ ತಾರತಮ್ಯದ ಧೋರಣೆ ಹುಟ್ಟಬಾರದು ಅನ್ನುವ ಕಾರಣಕ್ಕೆ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ, ಹಾಗಾಗಿ ಎಲ್ಲ ಮಕ್ಕಳು ಅದನ್ನು ಪಾಲಿಸಬೇಕು. ಶಾಲೆಗಳಿಗೆ ಮಕ್ಕಳು ತೊಡುವ ಸಮವಸ್ತ್ರದ ಬಗ್ಗೆ ಗೊಂದಲ ಇರಬಾರದು ಮತ್ತು ರಾಜಕೀಯ ನಡೆಯಬಾರದು ಎಂದು ತಾರಾ ಹೇಳಿದರು. ಮಕ್ಕಳಲ್ಲಿ ಯೂನಿಫಾರ್ಮಿಟಿ ಭಾವನೆಯನ್ನು ಯೂನಿಫಾರ್ಮ್ ಹುಟ್ಟಿಸುತ್ತದೆ ಎಂದು ನಟಿ ಹೇಳಿದರು.

ನಮ್ಮ ನಮ್ಮ ಧರ್ಮಗಳ ಆಚರಣೆಯಯನ್ನು ನಾವು ಮನೆಗಳಿಗೆ ಸೀಮಿತಗೊಳಿಸಿಕೊಳ್ಳಬೇಕು, ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ. ಒಂದು ಧರ್ಮ ಜಾಸ್ತಿ ಮತ್ತೊಂದು ಕಮ್ಮಿ ಅನ್ನೋ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಡೀ ವಿಶ್ವದಲ್ಲಿ ಸರ್ವಧರ್ಮ ಸಹಿಷ್ಣು ದೇಶವೆಂದರೆ ಭಾರತ ಮಾತ್ರ. ಬೇರೆ ದೇಶಗಳೆಲ್ಲ ತಾವು ಆಚರಿಸುವ ಧರ್ಮವನ್ನು ಮಾತ್ರ ಪ್ರತಿಪಾದಿಸುತ್ತವೆ. ಬೇರೆ ಧರ್ಮಗಳಿಗೆ ಅಲ್ಲಿ ಅವಕಾಶವಿರೋದಿಲ್ಲ. ಆದರೆ ನಮ್ಮ ದೇಶದಲ್ಲಿ ಮಾತ್ರ ಎಲ್ಲ ಧರ್ಮಗಳು ಸಮಾನ ಮತ್ತು ನಮ್ಮ ಧರ್ಮದ ಕಟ್ಟುಪಾಡುಗಳನ್ನು ಆಚರಿಸಲು ನಾವು ಸ್ವತಂತ್ರರು ಎಂದು ತಾರಾ ಹೇಳಿದರು.

ತಾವು ಇತ್ತೀಚಿಗೆ ‘ದಿ ಕಾಶ್ಮೀರ್ ಫೈಲ್ಸ್‘ ಚಿತ್ರ ನೋಡಿದ್ದಾಗಿ ತಾರಾ ಹೇಳಿದರು. ಕಾಶ್ಮೀರನಲ್ಲಿ ಮೊದಲು ನಡೆಯುತ್ತಿದ್ದ ಸಂಗತಿಗಳ ಬಗ್ಗೆ ನಾವು ಕೇವಲ ಕೇಳಿಸಿಕೊಳ್ಳುತ್ತಿದ್ದೆವು. ಅಲ್ಲಿನ ವಾಸ್ತವಾಂಶ, ಅಲ್ಲಿ ನಡೆಯುತ್ತಿದ್ದ ಘೋರ ಮತ್ತು ಅನ್ಯಾಯ, ಅತ್ಯಾಚಾರ ಮತ್ತು ದೌರ್ಜನ್ಯಗಳ ಬಗ್ಗೆ ನಮಗೆ ಗೊತ್ತಾಗುತ್ತಲೇ ಇರಲಿಲ್ಲ.  ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಅಲ್ಲಿ ನಡೆಯುತ್ತಿದ್ದ ವಿದ್ಯಮಾನಗಳ ನೈಜ್ಯ ಚಿತ್ರಣ ನೀಡಿದೆ. ಸಿನಿಮಾ ನೋಡಿದ ಬಳಿಕ ನನ್ನಲ್ಲಿ ಹುಟ್ಟಿದ ಆಕ್ರೋಷ, ದುಃಖ, ಬೇಜಾರು ಅಷ್ಟಿಷ್ಟಲ್ಲ ಎಂದು ತಾರಾ ಹೇಳಿದರು.

ಇದನ್ನೂ ಓದಿ:  ಸಾಲ ತೀರಿಸಲಿಲ್ಲ ಎಂದು ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಕಿರಾತಕ