AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!

Video: ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!

ಅಕ್ಷತಾ ವರ್ಕಾಡಿ
|

Updated on: Sep 01, 2026 | 1:50 PM

Share

ಚಿಕ್ಕಬಳ್ಳಾಪುರ ಜಿಲ್ಲೆಯ ಅಂಬಿಗನಹಳ್ಳಿ ಗ್ರಾಮದಲ್ಲಿ ತರುಣ್ ಎಂಬ ಯುವಕ ತನ್ನ ಸೀತೆ ಹೆಸರಿನ ಗರ್ಭಿಣಿ ಹಸುವಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾನೆ. ಸಾವಿರಾರು ಜನ ಗ್ರಾಮಸ್ಥರು ಹಾಗೂ ಬಂಧುಗಳನ್ನು ಆಹ್ವಾನಿಸಿ, ಸೀಮಂತದ ಬಳಿಕ ಎಲ್ಲರಿಗೂ ಹೋಳಿಗೆ ಊಟ ಬಡಿಸಿ ಸಂಭ್ರಮಿಸಿದ್ದಾನೆ. ಇದು ರಾಜ್ಯದಲ್ಲೇ ಗಮನ ಸೆಳೆದ ವಿಶಿಷ್ಟ ಆಚರಣೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಬಿಗನಹಳ್ಳಿ ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತರುಣ್ ಎಂಬ ಯುವಕ ತನ್ನ ಮನೆಯಲ್ಲಿ ಸಾಕಿರುವ ಸೀತೆ ಹೆಸರಿನ ಹಸುವಿಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾನೆ. ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಅದ್ಧೂರಿಯಾಗಿ ಮಾಡುವ ಸೀಮಂತದ ರೀತಿಯಲ್ಲೇ ಈ ಹಸುವಿಗೆ ಮಾಡಿ ಗಮನ ಸೆಳೆದಿದ್ದಾನೆ. ಈ ವಿಶಿಷ್ಟ ಆಚರಣೆಗೆ ಗ್ರಾಮದ ಬಂಧುಬಳಗ ಹಾಗೂ ಎಲ್ಲಾ ಜಾತಿ ಜನಾಂಗದವರನ್ನು ಆಹ್ವಾನಿಸಿದ್ದು, ಸಾವಿರಾರು ಜನ ಗ್ರಾಮಸ್ಥರು ಈ ಸೀಮಂತ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಸೀತೆ ಹಸುವಿಗೆ ಸೀರೆ ಉಡಿಸಿ, ಹೂ ಮುಡಿಸಿ, ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಸೀಮಂತ ನಡೆಸಲಾಯಿತು. ಗರ್ಭಿಣಿ ಹಸುವಿಗೆ ಇಷ್ಟವಾಗುವ ತಿಂಡಿ ತಿನಿಸುಗಳನ್ನು ಸಹ ನೀಡಲಾಯಿತು. ಸೀಮಂತದ ಬಳಿಕ ಆಗಮಿಸಿದ್ದ ಸಾವಿರಾರು ಜನರಿಗೆ ತರುಣ್ ಹೋಳಿಗೆ ಊಟ ಅಂದರೆ ಸಿಹಿ ಊಟವನ್ನು ಏರ್ಪಡಿಸಿ ಸಂತಸ ಹಂಚಿಕೊಂಡಿದ್ದಾನೆ. ಈ ವಿಶಿಷ್ಟ ಕಾರ್ಯಕ್ಕಾಗಿ ತರುಣ್ ಸುಮಾರು ಐದರಿಂದ ಆರು ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಈ ಪ್ರೀತಿಯ ಮತ್ತು ಭಕ್ತಿಯ ಆಚರಣೆಯು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Follow Us