25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
1999ರಲ್ಲಿ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿತ್ತು. ಈಗ 25 ವರ್ಷಗಳು ಕಳೆದಿದ್ದು ಮರು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನಗಳನ್ನು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ಮೆಲುಕು ಹಾಕಿದ್ದಾರೆ. ಅಂದು ಉಪೇಂದ್ರ ಅವರಿಗೆ ನೀಡಿದ ಸಂಭಾವನೆ ಎಷ್ಟು? ಆ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.
‘ಆ ಸಿನಿಮಾಗೆ ಉಪೇಂದ್ರ ಅವರು ಒಂದೂವರೆ ವರ್ಷ ಕಷ್ಟಪಟ್ಟಿದ್ದರು. ಆಗ ತುಂಬ ಕಡಿಮೆ ಸಂಭಾವನೆ ನೀಡಿದ್ದೆ. 18 ಲಕ್ಷ ರೂಪಾಯಿ ನೀಡಿರಬಹುದು. 3ರಿಂದ ಮೂರುವರೆ ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡಿದ್ವಿ. ಡಬಲ್ ಲಾಭ ತಂದುಕೊಟ್ಟಿತು. ಅದು ಆ ಕಾಲಕ್ಕೆ ಕೆಜಿಎಫ್, ಕಾಂತಾರ ರೀತಿ ಹಿಟ್ ಆಯಿತು’ ಎಂದು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ಹೇಳಿದ್ದಾರೆ. ಉಪ್ಪಿ ಅವರ ಜನ್ಮದಿನದ ಪ್ರಯುಕ್ತ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos