ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ

|

Updated on: Mar 31, 2025 | 9:09 PM

ಶಿವರಾಜ್​ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಅವರು ‘45’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟೀಸರ್ ಬಿಡುಗಡೆ ವೇಳೆ ಉಪೇಂದ್ರ ಅವರು ಈ ಸಿನಿಮಾ ತಂಡದ ಬಗ್ಗೆ ಮಾತಾಡಿದರು. ಶಿವರಾಜ್​ಕುಮಾರ್​ ಹಾಗೂ ರಾಜ್​ ಬಿ. ಶೆಟ್ಟಿ ಜತೆ ಕೆಲಸ ಮಾಡಿದ ಅನುಭವವನ್ನು ಉಪೇಂದ್ರ ಹಂಚಿಕೊಂಡರು.

ಉಪೇಂದ್ರ, ಶಿವರಾಜ್​ಕುಮಾರ್ (Shivarajkumar), ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ (45 Movie Teaser) ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಟೀಸರ್ ರಿಲೀಸ್ ವೇಳೆ ಉಪೇಂದ್ರ ಅವರು ಚಿತ್ರತಂಡದ ಬಗ್ಗೆ ಮಾತನಾಡಿದರು. ಶಿವರಾಜ್​ಕುಮಾರ್​ ಮತ್ತು ರಾಜ್​ ಬಿ. ಶೆಟ್ಟಿ ಜೊತೆ ಕೆಲಸ ಮಾಡಿದ ಅನುಭವವನ್ನು ಉಪೇಂದ್ರ (Upendra) ಅವರು ಹಂಚಿಕೊಂಡರು. ‘ಶಿವಣ್ಣ ಅವರೇ ನನಗೆ ಮೊದಲು ಸ್ಫೂರ್ತಿ ತುಂಬಿದ್ದು. ಇವರಿಂದ ಎಷ್ಟೋ ನಿರ್ದೇಶಕರು ಸೂಪರ್ ಹಿಟ್ ಆಗಿದ್ದಾರೆ. ಅದಕ್ಕೆ ಶಿವಣ್ಣ ಅವರಿಗೆ ಅಪರಂಜಿ ಅಂತ ಹೇಳುವುದು’ ಎಂದಿದ್ದಾರೆ ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.