ಬಿ.ಕೆ. ಹರಿಪ್ರಸಾದ್ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್
ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ಕೊಟ್ಟ ಭಾಷಣ ಮಾಡದೆ ರಾಜ್ಯಪಾಲರು ಸದನದಿಂದ ಹೊರ ಹೋಗುವ ವೇಳೆ ನಡೆದ ಹೈಡ್ರಾಮಾ ವಿಚಾರ ವಿಧಾನ ಪರಿಷತ್ನಲ್ಲಿ ಆಡಳಿತ ಮತ್ತು ವಿಪಕ್ಷದ ನಡುವೆ ಗಲಾಟೆಗೆ ಕಾರಣವಾಗಿದೆ. ಸದಸ್ಯ ಹರಿಪ್ರಸಾದ್ರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ ಆಗ್ರಹಿಸಿದ ಪರಿಣಾಮ ಪರಿಷತ್ ರಣಾಂಗಣವಾಗಿ ಮಾರ್ಪಟ್ಟಿದೆ. ಹೀಗಾಗಿ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಕೆಲಕಾಲ ಮೂಂದೂಡಬೇಕಾಯಿತು.
ಬೆಂಗಳೂರು, ಜನವರಿ 23: ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿದ ವಿಚಾರ ಸಂಬಂಧ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕು ಎಂದು ಬಿಜೆಪಿ ಒತ್ತಾಯಿಸಿದ ಹಿನ್ನೆಲೆ ವಿಧಾನ ಪರಿಷತ್ ರಣಾಂಗಣವಾದ ಪ್ರಸಂಗ ನಡೆದಿದೆ. ರಾಜ್ಯಪಾಲರು ಬಂದಾಗ ‘ಕೈ’ ಸದಸ್ಯರ ಗೂಂಡಾ ವರ್ತನೆ ಸರಿಯಲ್ಲ. ಹೀಗಾಗಿ ಬಿ.ಕೆ. ಹರಿಪ್ರಸಾದ್ ಅಮಾನತು ಆಗಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ನೋಟಿಸ್ ಕೊಟ್ಟಿಲ್ಲ, ಹಾಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಲು ಆಗಲ್ಲ ಎಂದ ಸಭಾಪತಿ ಹೊರಟ್ಟಿ ಹೇಳಿದ್ದರಿಂದ ಕಾಂಗ್ರೆಸ್ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದಾರೆ. ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಮಾತಿನ ಚಕಮಕಿ ಉಂಟಾದ ಕಾರಣ ವಿಧಾನಪರಿಷತ್ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಕೆಲಕಾಲ ಮೂಂದೂಡಬೇಕಾಯಿತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
