ಭಟ್ಕಳದ ಮಾವಿನಕುರ್ವೆ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ: ವಿಡಿಯೋ ನೋಡಿ
ಮುಂಜಾನೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ, ಅರಬ್ಬೀ ಸಮದ್ರದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಣಿಸಿಕೊಂಡ ಭಾರೀ ಗಾಳಿಮಳೆಗೆ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ. ಕೂಡಲೇ ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಕಾರವಾರ, ಏಪ್ರಿಲ್ 20: ಅರಬ್ಬೀ ಸಮುದ್ರದಲ್ಲಿ ಗಾಳಿ ಮಳೆಗೆ ಮೀನುಗಾರಿಕಾ ಬೋಟ್ (Fishing Boat) ಶನಿವಾರ ಬೆಳಗ್ಗೆ ಮುಳುಗಡೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದ (Bhatkal) ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ‘ಓಂ ಮಹಾಗಣಪತಿ’ ಹೆಸರಿನ ಬೋಟ್ ಮುಳುಗಡೆಯಾಗಿದೆ. ಬೋಟ್ನಲ್ಲಿದ್ದ 4 ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ. ಮುಳುಗಡೆಯಾಗಿರುವ ಬೋಟ್, ಮಹಾದೇವ ಖಾರ್ವಿ ಎಂಬವರಿಗೆ ಸೇರಿದ್ದಾಗಿದೆ.
ಮುಂಜಾನೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ, ಅರಬ್ಬೀ ಸಮದ್ರದಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಣಿಸಿಕೊಂಡ ಭಾರೀ ಗಾಳಿಮಳೆಗೆ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ. ಕೂಡಲೇ ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನವರು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ದುರ್ಘಟನೆಯಿಂದ ಬೋಟ್ ಮಾಲಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಭಾರೀ ಗಾಳಿ ಮಳೆ ಶನಿವಾರ ಬೆಳಗ್ಗೆಯೇ ಪ್ರಾರಂಭಗೊಂಡಿದೆ.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭಾರಿ ಮಳೆ: ಸಿಡಿಲಿನ ಹೊಡೆತಕ್ಕೆ ಶಿವಮೊಗ್ಗದಲ್ಲಿ ರೈತ ಬಲಿ
ಶುಕ್ರವಾರ ರಾತ್ರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಬೆಂಗಳೂರಿನ ಕೆಂಗೇರಿ, ಕುಂಬಳಗೋಡು, ಯಲಹಂಕ, ನೆಲಮಂಗಲ ಸೇರಿದಂತೆ ಹಲವೆಡೆ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗದ ವಿವಿಧ ಕಡೆಗಳಲ್ಲಿಯೂ ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ