ಮೆಟ್ರೋ ನಿಲ್ದಾಣಕ್ಕೆ ವಿಷ್ಣುವರ್ಧನ್ ಹೆಸರು ಇಡಬೇಕು; ವಿ. ನಾಗೇಂದ್ರ ಪ್ರಸಾದ್ ಆಗ್ರಹ
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇಂದು (ಸೆಪ್ಟೆಂಬರ್ 18) ವಿಷ್ಣುವರ್ಧನ್ ಅವರ ಜನ್ಮದಿನ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಗೀತ ಸಾಹಿತಿ ಹಾಗೂ ವಿಷ್ಣು ಅಭಿಮಾನಿ ವಿ. ನಾಗೇಂದ್ರ ಪ್ರಸಾದ್ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.
‘ವಿಷ್ಣು ದಾದಾ ಸ್ಮಾರಕ ಬೇಗ ಆಗಬೇಕು. ಇದರಲ್ಲಿ ಯಾವುದೇ ವಿಳಂಬ ಆಗಬಾರದು. ಕೊರೊನಾ ಇದ್ದರೂ ಸಾಕಷ್ಟು ಜನರು ಆಗಮಿಸಿದ್ದಾರೆ. ನಿಜಕ್ಕೂ ಈ ಬಗ್ಗೆ ಖುಷಿ ಆಗುತ್ತದೆ. ಮೆಟ್ರೋ ನಿಲ್ದಾಣಕ್ಕೆ ವಿಷ್ಣುವರ್ಧನ್ ಹೆಸರು ಇಡಬೇಕು’ ಎಂದು ನಾಗೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಜನ್ಮದಿನ: ಎಂದೂ ಮರೆಯಲಾಗದ ವಿಷ್ಣು ದಾದಾಗೆ ಸೆಲೆಬ್ರಿಟಿಗಳು ವಿಶ್ ಮಾಡ್ತಿರೋದು ಹೀಗೆ..