ಹಸಿವು ನೀಗಿಸಲು ಉಡ ಬೇಟೆಯಾಡಿದ ಕಾಳಿಂಗ; ಕೊನೆಗೆ ಏನಾಯ್ತು ಎಂದು ನೀವೇ ನೋಡಿ
ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡಿದ್ದಲ್ಲದೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುವಂತಾಗಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.
ಉತ್ತರ ಕನ್ನಡ: ಹಸಿವು ಹೆಚ್ಚಾದಾಗ ಸಿಕ್ಕಿದ್ದನ್ನು ತಿನ್ನಲು ಮುಂದಾಗುವುದು ಸಹಜ. ಆದರೆ ಇಲ್ಲೊಂದು ಕಾಳಿಂಗ ಸರ್ಪ ಉಡವನ್ನೇ ಬೇಟೆಯಾಡಿ ನುಂಗಲು ಹರಸಾಹಸಪಟ್ಟಿದೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಾಣ ಕ್ರಾಸ್ ಬಳಿ ನಡೆದಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಯತ್ನಿಸಿ ವಿಫಲಾಗಿದೆ. ಉಡದ ಗಾತ್ರವೂ ದೊಡ್ಡದಾಗಿದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲು ಸಾಧ್ಯವಾಗದೆ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos