ಕರ್ತವ್ಯ ಪ್ರಜ್ಞೆ ಮೆರೆದು ವೃತ್ತಿಯೆಡೆಗಿನ ಶ್ರದ್ಧೆಗೆ ಮಾದರಿಯಾಗಿದ್ದಾರೆ ಡಾ ಗೋವಿಂದ ನಂದಕುಮಾರ!
ಇವರು ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಅದಿನ್ನೂ 3 ಕಿಮೀ ದೂರ ಇರುವಾಗ ಕಿಮೀ ದೂರ ಇರುವಾಗ ಭಾರೀ ಟ್ರಾಫಿಕ್ ನಲ್ಲಿ ಸಿಲುಕಿಕೊಂಡರು. ಮುಂದಿನ 45 ನಿಮಿಷಗಳಲ್ಲಿ ಅವರು ಒಂದು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಿತ್ತು
ಬೆಂಗಳೂರು: ಸೆಲೆಬ್ರಿಟಿಗಳು ವೀಕೆಂಡ್ ಸಮಯ ಆಯೋಜಿಸಲಾಗುವ ಮ್ಯಾರಾಥಾನ್, ಹಾಫ್ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಅರ್ಧ, ಒಂದು ಕಿಮೀ ಓಡಿ ಮಾಧ್ಯಮದ ಕೆಮೆರಾಗಳಿಗೆ ಪೋಸ್ ನೀಡೋದನ್ನು ನೀವು ನೋಡಿರಬಹುದು. ಆದರೆ, ಈ ವಿಡಿಯೋದಲ್ಲಿ ಏದುಸಿರು ಬಿಡುತ್ತಾ ಓಡುತ್ತಿರುವವರ ಯಾವುದೋ ಚ್ಯಾರಿಟಿಗಾಗಿ ಅಲ್ಲ ಮತ್ತು ಅವರು ಸೆಲಿಬ್ರಿಟಿಯೂ ಅಲ್ಲ. ಇನ್ನು ಮೇಲೆ ಅವರು ಸೆಲಿಬ್ರಿಟಿ ಅನಿಸಿಕೊಳ್ಳೋದು ನಿಶ್ಚಿತ ಮಾರಾಯ್ರೇ. ಇವರು ನಗರದ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಸರ್ಜನ್ (surgeon) ಆಗಿ ಕೆಲಸ ಮಾಡುವ ಡಾ ಗೋವಿಂದ ನಂದಕುಮಾರ (Dr Govind Nandakumar). ಆಗಸ್ಟ್ 30 ರಂದು ಇವರು ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಅದಿನ್ನೂ 3 ಕಿಮೀ ದೂರ ಇರುವಾಗ ಕಿಮೀ ದೂರ ಇರುವಾಗ ಭಾರೀ ಟ್ರಾಫಿಕ್ ನಲ್ಲಿ ಸಿಲುಕಿಕೊಂಡರು. ಮುಂದಿನ 45 ನಿಮಿಷಗಳಲ್ಲಿ ಅವರು ಒಂದು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಿತ್ತು. ಹಾಗಾಗಿ ಅವರು ಕಾರಿನಿಂದ ಇಳಿದು ಹೀಗೆ ಓಡುತ್ತಾ ಹೋಗಿ ಆಸ್ಪತ್ರೆ ತಲುಪಿದರು. ವೃತ್ತಿಯೆಡೆ ಇಂಥ ಶ್ರದ್ಧೆಯಿಟ್ಟುಕೊಂಡು ಕರ್ತವ್ಯ ಪ್ರಜ್ಞೆ ಮೆರೆಯುವ ವೈದ್ಯರು ಈ ಜಮಾನಾದಲ್ಲಿ ಅಪರೂಪ ಮಾರಾಯ್ರೇ.