Video: ನಾಗೇಂದ್ರ ಪತ್ನಿ ವಿಚಾರಣೆ ಅಂತ್ಯ: ಹೇಗೆ ಕರೆತಂದಿದ್ದರೋ ಹಾಗೇ ಬಿಟ್ಟುಬಂದ ಇಡಿ ಅಧಿಕಾರಿಗಳು

Edited By:

Updated on: Jul 17, 2024 | 8:32 PM

ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರದ ರಹಸ್ಯ ಬಗೆದಷ್ಟು ಬಯಲಾಗುತ್ತಿದೆ. ಇಂದು ನಾಗೇಂದ್ರ ಪತ್ನಿ ಮಂಜುಳಾರನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಇದೀಗ ವಿಚಾರಣೆ ಅಂತ್ಯವಾಗಿದೆ. ಹಾಗಾಗಿ ಮನೆಯಿಂದ ಹೇಗೆ ಕರೆತಂದಿದ್ದರೊ ಹಾಗೇ ಇದೀಗ ಇಡಿ ಅಧಿಕಾರಿಗಳು ಅವರನ್ನು ಬಿಟ್ಟುಬಂದಿದ್ದಾರೆ. 

ಬೆಂಗಳೂರು, ಜುಲೈ 17: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ಅಧಿಕಾರಿಗಳಿಂದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ (B. Nagendra) ಪತ್ನಿ ಮಂಜುಳಾ ವಿಚಾರಣೆ ಇದೀಗ ಅಂತ್ಯವಾಗಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ಮಾಡಿದ್ದು, ನಾಗೇಂದ್ರ ರಾಮ್ಕಿ ಉತ್ಸವ್ ಅಪಾರ್ಟ್​ಮೆಂಟ್​ಗೆ ಇಡಿ ತಂಡ ಬಿಟ್ಟುಹೋಗಿದೆ. ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ನಿವಾಸದಿಂದ ಕರೆತಂದು ವಿಚಾರಣೆ ಮಾಡಿದ್ದರು. ಇದೀಗ ವಿಚಾರಣೆ ಅಂತ್ಯ ಬಳಿಕ ಹೇಗೆ ಕರೆತಂದಿದ್ದರೊ ಹಾಗೇ ಬಿಟ್ಟುಬಂದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More