ವಿಜಯೇಂದ್ರ ಮತ್ತು ನಾನು ಬೇರೆ ಬೇರೆ ಪಕ್ಷದವರಾಗಿದ್ದರೂ ಸಮುದಾಯದ ವಿಷಯದಲ್ಲಿ ಒಂದೇ: ಎಂಬಿ ಪಾಟೀಲ್

Updated on: May 31, 2025 | 8:32 PM

ತಮ್ಮ ಭಾಷಣದಲ್ಲಿ ಸಂಘಟನೆ ವಿಷಯಕ್ಕೆ ಹೆಚ್ಚು ಮಹತ್ವ ನೀಡಿದ ಪಾಟೀಲ್ ಲಿಂಗಾಯತ ಸಮುದಾಯಕ್ಕೆ ಸೇರಿದ ಉಪಪಂಗಡಗಳನ್ನು ಒಗ್ಗೂಡಿಸುವುದು ಬಹಳ ಮುಖ್ಯವಾಗಿದೆ, ಕಮ್ಮಾರ ಕುಂಬಾರ ಮೊದಲಾದ ಪಂಗಡಗಳನ್ನು ದೂರ ಮಾಡಿದ್ದೇವೆ, ಅವರನ್ನು ಹತ್ತಿರಕ್ಕೆ ಕರೆದುಕೊಳ್ಳಬೇಕು, ಜಗತ್ತಿನ ಮೊದಲ ಸಂಸತ್ತು ಎಂದು ಕರೆಸಿಕೊಳ್ಳುವ ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಜನ ಸೇರುತ್ತಿದ್ದರು ಎಂದರು.

ಮಂಡ್ಯ, ಮೇ 31: ಅಖಿಲ ಭಾರತ ವೀರಶೈವ ಸಮಾಜ ಮಂಡ್ಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಚಿವ ಎಂಬಿ ಪಾಟೀಲ್ ವೀರಶೈವ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳು ಕೇವಲ ವೀರಶೈವ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ದಾಸೋಹವನ್ನು ಒದಗಿಸುತ್ತಿವೆ ಎಂದು ಹೇಳಿದರು. ಸಮುದಾಯದ ಸಂಘಟನೆ ಬಗ್ಗೆ ಮಾತಾಡಿದ ಅವರು ತಾನು ಮತ್ತು ವೇದಿಕೆ ಮೇಲಿದ್ದ ವಿಜಯೇಂದ್ರ ಬೇರೆ ಬೇರೆ ಪಕ್ಷಗಳಿಗೆ ಸೇರಿದವರಾಗಿರಬಹದು, ಅದರೆ ಸಮುದಾಯದ ಸಂಘಟನೆ ವಿಷಯ ಬಂದಾಗ ತಾವು ಒಂದೇ ಎಂದು ಹೇಳಿ ಸುತ್ತೂರು ಶ್ರೀಗಳು; ಸಿದ್ದೇಶ್ವರ ಶ್ರೀ ಮತ್ತು ಪೇಜಾವರ ಶ್ರೀಗಳನ್ನು ಸುತ್ತೂರು ಮಠಕ್ಕೆ ಕರೆಸಿ ಪ್ರವಚನಗಳನ್ನು ಕೊಡಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:  ಬೆಂಗಳೂರು-ವಿಜಯಪುರ ರೈಲು ಪ್ರಯಾಣ 15ರಿಂದ 10 ಗಂಟೆಗೆ ಇಳಿಕೆ: ಎಂಬಿ ಪಾಟೀಲ್ ಮಹತ್ವದ ಚರ್ಚೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 31, 2025 06:35 PM