ವಿಜಯೇಂದ್ರಗೆ ಜನಬೆಂಬಲವಿದೆ, ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರು, ನಾನಲ್ಲ: ಯಡಿಯೂರಪ್ಪ
ಹೈಕಮಾಂಡ್ಗೆ ಪತ್ರ ಬರೆದಾಗ ಮೆತ್ತಗಾಗಿ ಕೆಲ ದಿನಗಳ ಬಳಿಕ ಪುನಃ ತಮ್ಮ ಹಳೆಯ ಸ್ವಭಾವ ಮುಂದುವರಿಸುವ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತಾಡಿದ ಯಡಿಯೂರಪ್ಪ, ಅವರೊಂದಿಗೆ ಮಾತಾಡಿದರೆ ಎಲ್ಲವೂ ಸರಿಗೋಗುತ್ತದೆ, ಅವರು ಏನು ಬೇಕಾದರೂ ಹೇಳಲಿ, ತಾನು ರಿಯಾಕ್ಟ್ ಮಾಡಲ್ಲ, ನಮ್ಮ ಹೋರಾಟ ಇರೋದು ಕಾಂಗ್ರೆಸ್ ವಿರುದ್ಧ ಎಂದು ಹೇಳಿದರು.
ಶಿವಮೊಗ್ಗ: ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಅವರ ತಂದೆ ಬಿಎಸ್ ಯಡಿಯೂರಪ್ಪನವರಿಂದಾಗಿ ಎಂದು ರಮೇಶ್ ಜಾರಕಿಹೊಳಿ ಮಾಡಿರುವ ಕಾಮೆಂಟ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಯವರು, ಅವರ ಹೇಳಿಕೆಗಳಿಗೆಲ್ಲ ತಾನು ಉತ್ತರ ನೀಡಲ್ಲ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರೇ ಹೊರತು ತಾನಲ್ಲ, ಅವರಿಗೆ ರಾಜ್ಯದಾದ್ಯಂತ ಜನ ಬೆಂಬಲ ಸೂಚಿಸಿದ್ದಾರೆ, ಮೊನ್ನೆ ಮೂರು ಜಿಲ್ಲೆಗಳಲ್ಲಿ ನಡೆದ ಉಪ ಚುನಾವಣೆಯಲ್ಲ್ಲೂ ಜನ ಅವರನ್ನು ಬೆಂಬಲಿಸಿರುವ ರೀತಿ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ರಾಜಕಾರಣದಲ್ಲಿ ಪಳಗಿದವರಲ್ಲ; ಯಡಿಯೂರಪ್ಪ ಹೋರಾಟ ಮಾಡಿದವರು: ರಮೇಶ್ ಜಾರಕಿಹೊಳಿ