ಮೀನಿಗಾಗಿ ಬಲೆ ಬೀಸಿದ ಮೀನುಗಾರರಿಗೆ ಸಿಕ್ಕಿದ್ದು ಹಾವು!
ಮೀನುಗಾರರು ಮೀನಿಗಾಗಿ ಬಲೆ ಬೀಸಿದಾಗ, ಯಾವುದೇ ಬೆಲೆಬಾಳುವ ವಸ್ತುಗಳು ಸಿಕ್ಕರೆ ಅವರು ತುಂಬಾ ಸಂತೋಷಪಡುತ್ತಾರೆ. ಆದರೆ ಇಲ್ಲಿ ಅವರಿಗೆ ಭಯಾನಕ ಅನುಭವವಾಯಿತು. ಒಳ್ಳೆಯ ಮೀನು ಹಿಡಿಯುವ ನಿರೀಕ್ಷೆಯ ಬದಲು, ಅವರಿಗೆ ಅನಿರೀಕ್ಷಿತ ಆಶ್ಚರ್ಯವಾಯಿತು. ಅವರ ಬಲೆಗೆ ಮೀನಿನ ಬದಲು ಹಾವೊಂದು ಸಿಕ್ಕಿಹಾಕಿಕೊಂಡಿತು. ಆಮೇಲೇನಾಯ್ತು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಬಲೆ ಹಾಕಿದ ಮೀನುಗಾರರಿಗೆ ಮೀನಿನ ಜೊತೆಗೆ ಹಾವೊಂದು ಸಿಕ್ಕಿದೆ. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು.
ನವದೆಹಲಿ, ಅಕ್ಟೋಬರ್ 31: ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಅಪಾಯಕಾರಿ ಜೀವಿಯೊಂದು ಸಿಕ್ಕಿಬಿದ್ದಿದೆ. ಇದನ್ನು ನೋಡಿ ಮೀನುಗಾರರು ಶಾಕ್ ಆಗಿದ್ದಾರೆ. ಬಿಹಾರದ ಬಂಕಾ ಜಿಲ್ಲೆಯ ಅಮರ್‌ಪುರ ಬ್ಲಾಕ್‌ನ ಡಿಗ್ಗಿ ಗ್ರಾಮದ ಪಾನ್ ಅಣೆಕಟ್ಟಿನಲ್ಲಿ ಈ ಆಘಾತಕಾರಿ ಘಟನೆ (Shocking News) ನಡೆದಿದೆ. ಬಲೆ ಹಾಕಿದ ಮೀನುಗಾರರಿಗೆ ಮೀನಿನ ಜೊತೆಗೆ ಹಾವೊಂದು ಸಿಕ್ಕಿದೆ. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. ಅವರು ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಬಹಳ ಎಚ್ಚರಿಕೆಯಿಂದ ಅವರೆಲ್ಲರೂ ಹಾವನ್ನು ಬಲೆಯಿಂದ ಮುಕ್ತಗೊಳಿಸಿ ಕಾಡಿನ ಬಳಿ ಸುರಕ್ಷಿತವಾಗಿ ಬಿಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

