ಕರ್ನಾಟಕ ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!

Edited By:

Updated on: Apr 10, 2026 | 8:50 AM

ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವಕರಿಬ್ಬರು ರಾಜಾರೋಷವಾಗಿ ಗಾಂಜಾ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ರೈಲು ಸಂಖ್ಯೆ 12650ರಲ್ಲಿ ರಾತ್ರಿ ವೇಳೆ ನಡೆದ ಈ ಘಟನೆಯಿಂದ ಸಹಪ್ರಯಾಣಿಕರು ಆತಂಕಗೊಂಡಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರೈಲ್ವೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ವಿಡಿಯೋ ಇಲ್ಲಿದೆ.

ಹುಬ್ಬಳ್ಳಿ, ಏಪ್ರಿಲ್ 10: ಹಜರತ್ ನಿಜಾಮುದ್ದೀನ್‌ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12650) ರೈಲಿನಲ್ಲಿ ಯುವಕರಿಬ್ಬರು ಬಹಿರಂಗವಾಗಿ ಗಾಂಜಾ ಸೇವನೆ ಮಾಡಿದ್ದಾರೆ. ರಾತ್ರಿ ಪ್ರಯಾಣದ ವೇಳೆ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇದುತ್ತಾ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಸಾರ್ವಜನಿಕರ ಭಯವಿಲ್ಲದೆ ಅಟ್ಟಹಾಸ ಮೆರೆದ ಈ ಯುವಕರ ಕೃತ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ರೈಲ್ವೆ ಪೊಲೀಸರು ಇವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us