ವಿರಾರ್ ಕಟ್ಟಡ ಕುಸಿತ: ಮೊದಲ ಹುಟ್ಟುಹಬ್ಬ ಆಚರಿಸುವಾಗಲೇ ಅಮ್ಮನೊಂದಿಗೆ ಶವವಾದ ಮಗು!
ವಿರಾರ್ ಕಟ್ಟಡ ಕುಸಿತ ಉಂಟಾದ ಜಾಗದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತಪಟ್ಟ 1 ವರ್ಷದ ಉತ್ಕರ್ಷ ಜೋವಿಲ್ ಮತ್ತು ಆಕೆಯ ತಾಯಿ ಆರೋಹಿ ಓಂಕಾರ್ ಜೋವಿಲ್ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಉತ್ಕರ್ಷಳ ತಂದೆ ಮತ್ತು ಆರೋಹಿಯ ಪತಿ ಓಂಕಾರ್ ಜೋವಿಲ್ ಇನ್ನೂ ಕಾಣೆಯಾಗಿದ್ದಾರೆ. ಆ ಕುಟುಂಬವು ಉತ್ಕರ್ಷಳ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ.
ಮುಂಬೈ, ಆಗಸ್ಟ್ 27: ಮಹಾರಾಷ್ಟ್ರದ (Maharashtra) ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿ ಇಂದು ಬೆಳಿಗ್ಗೆ 13 ವರ್ಷದ ಅಕ್ರಮ ಸೇತುವೆಯ ಒಂದು ಭಾಗ ಕುಸಿದು ಅಪಾರ್ಟ್‌ಮೆಂಟ್‌ನ ಒಂದು ಭಾಗವೂ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ತನ್ನ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ 1 ವರ್ಷದ ಹೆಣ್ಣು ಮಗು ಮತ್ತು ಆಕೆಯ 24 ವರ್ಷದ ತಾಯಿ ಕೂಡ ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಿಂದ ಬರ್ತಡೇ ಸಂಭ್ರಮಾಚರಣೆಯ ಡ್ರೆಸ್ನಲ್ಲೇ ಇದ್ದ ಪುಟ್ಟ ಕಂದಮ್ಮನ ಶವವನ್ನು ಹೊರಗೆ ತೆಗೆಯಲಾಗಿದೆ. ಆ ಮಗುವಿನ ಅಮ್ಮನ ಶವವನ್ನೂ ಹೊರತೆಗೆಯಲಾಗಿದೆ. ಆದರೆ, ಆ ಮಗುವಿನ ತಂದೆ ಇನ್ನೂ ಪತ್ತೆಯಾಗಿಲ್ಲ.
ವಿರಾರ್‌ನಲ್ಲಿರುವ 4 ಅಂತಸ್ತಿನ ರಮಾಬಾಯಿ ಅಪಾರ್ಟ್‌ಮೆಂಟ್‌ನ ಹಿಂಭಾಗ ಕುಸಿದ ನಂತರ ನಡೆದ ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರನ್ನು 1 ವರ್ಷದ ಉತ್ಕರ್ಷ ಜೋವಿಲ್ ಮತ್ತು ಆಕೆಯ ತಾಯಿ ಆರೋಹಿ ಓಂಕಾರ್ ಜೋವಿಲ್ ಎಂದು ಗುರುತಿಸಲಾಗಿದೆ. ಉತ್ಕರ್ಷಳ ತಂದೆ ಮತ್ತು ಆರೋಹಿಯ ಪತಿ ಓಂಕಾರ್ ಜೋವಿಲ್ ಇನ್ನೂ ನಾಪತ್ತೆಯಾಗಿದ್ದಾರೆ. ಈ ದುರಂತ ಸಂಭವಿಸಿದಾಗ ಅವರ ಕುಟುಂಬವು ಉತ್ಕರ್ಷಳ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಿತ್ತು. ಈ ಘಟನೆ ಬಹಳ ಸಂಕಟವನ್ನು ಉಂಟುಮಾಡಿದೆ. ಮಗುವಿನ ಶವವನ್ನು ಹೊರತೆಗೆಯುವಾಗ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕೂಡ ಭಾವುಕರಾದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

