ತಿರುಪತಿ ತಿಮ್ಮಪ್ಪನ ಸೇವೆಗೆ ಬಳಸುವ ಪುನುಗು ಬೆಕ್ಕು ಬೋನಿನಲ್ಲಿ ಸಿಕ್ಕಿಬಿತ್ತು! ವಿಡಿಯೋ ವೈರಲ್ ಆಯ್ತು!

ಸಾಧು ಶ್ರೀನಾಥ್​

Updated on: Jul 29, 2024 | 11:39 AM

Viverridae: ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅಪರೂಪದ ಬೆಕ್ಕು ಕಾಣಿಸಿಕೊಂಡಿದೆ. ಶೇಷಾಚಲಂ ಮತ್ತು ನಲ್ಲಮಲ ಅರಣ್ಯದಲ್ಲಿ ಕಂಡುಬರುವ ಈ ಅಪರೂಪದ ಪ್ರಾಣಿ ಗಂಗನಮ್ಮಕೋಡು ಪ್ರದೇಶದ ಈಲಿ ರಮೇಶ್ ಎಂಬುವವರ ಮನೆಯ ಆವರಣದಲ್ಲಿ ಪತ್ತೆಯಾಗಿದೆ. ಇಲಿ, ಹಂದಿಗಳನ್ನು ಹಿಡಿಯಲು ಹಾಕಿದ್ದ ಬೋನಿಗೆ ಪುನುಗು ಬೆಕ್ಕು ಸಿಕ್ಕಿಹಾಕಿಕೊಂಡಿದೆ. ಬೆಳಗ್ಗೆ ಬೋನಿನಲ್ಲಿದ್ದ ಈ ಪ್ರಾಣಿಯನ್ನು ನೋಡಿ ರಮೇಶ್ ಅವರ ಕುಟುಂಬಸ್ಥರು ಆಶ್ಚರ್ಯಚಕಿತರಾದರು. ವಿಷಯ ತಿಳಿದ ಸ್ಥಳೀಯರು ಅದನ್ನು ಪುನುಗು ಬೆಕ್ಕುಎಂದು ಗುರುತಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಈ ಬೆಕ್ಕಿನ ದೇಹದಲ್ಲಿರುವ ಗ್ರಂಥಿಗಳಿಂದ ಬರುವ ಬೆವರು ಒಣಗಿದಾಗ ಎಣ್ಣೆಯಂತೆ ಅಂಟಿಕೊಂಡಿರುತ್ತದೆ.. ಸುಗಂಧ ಪರಿಮಳವನ್ನು ಸೂಸುತ್ತದೆ.. ಅದಕ್ಕಾಗಿಯೇ ಈ ಎಣ್ಣೆಯನ್ನು ತಿರುಮಲ ಶ್ರೀವಾರಿಯ (ತಿರುಪತಿ ತಿಮ್ಮಪ್ಪನ) ಸೇವೆಗೆ ಬಳಸಲಾಗುತ್ತದೆ. ಶ್ರೀನಿವಾಸನ ಅಭಿಷೇಕ ಮುಗಿದ ನಂತರ ಈ ಪುನುಗು ಬೆಕ್ಕಿನ ಎಣ್ಣೆಯನ್ನು ಶ್ರೀಗಳ ತಲೆಯಿಂದ ಪಾದದವರೆಗೆ ಹಚ್ಚಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಬೆಕ್ಕುಗಳನ್ನು ಟಿಟಿಡಿ ವಿಶೇಷವಾಗಿ ಸಾಕುತ್ತಿದೆ. ತಿರುಮಲದ ಗೋಶಾಲೆಯಲ್ಲಿ ಪುನುಗು ಬೆಕ್ಕುಗಳನ್ನು ಸಾಕಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು