ವಯನಾಡ್ ಗುಡ್ಡ ಕುಸಿತ; ಸಂತ್ರಸ್ಥರಿಗೆ ಮೈಸೂರಿನ ಅನ್ವೇಷಣಾ ಟ್ರಸ್ಟ್ನಿಂದ ಅಗತ್ಯ ವಸ್ತುಗಳ ರವಾನೆ
ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು 250 ಕ್ಕೂ ಅಧಿಕ ಜನ ಅಸುನೀಗಿದ್ದು, ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನಲೆ ಕರ್ನಾಟಕದಿಂದ ನೆರೆ ರಾಜ್ಯ ಕೇರಳಕ್ಕೆ ಸಹಾಯ ಹಸ್ತ ನೀಡಿದ್ದು, ಮೈಸೂರಿನ ಅನ್ವೇಷಣಾ ಟ್ರಸ್ಟ್ ನೀರಿನ ಬಾಟಲಿ ಸೇರಿ ಹಲವು ಅಗತ್ಯ ವಸ್ತುಗಳನ್ನು ರವಾನೆ ಮಾಡುತ್ತಿದೆ.
ಮೈಸೂರು, ಜು.31: ದೇವರನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದು 250 ಕ್ಕೂ ಅಧಿಕ ಜನ ಅಸುನೀಗಿದ್ದು, ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನಲೆ ಕರ್ನಾಟಕದಿಂದ ನೆರೆ ರಾಜ್ಯ ಕೇರಳಕ್ಕೆ ಸಹಾಯ ಹಸ್ತ ನೀಡಿದ್ದು, ಮೈಸೂರಿನ ಅನ್ವೇಷಣಾ ಟ್ರಸ್ಟ್ನಿಂದ ಅಗತ್ಯ ವಸ್ತು ರವಾನೆ ಮಾಡಲಾಗುತ್ತಿದೆ. ಹೌದು, ಕೇರಳಕ್ಕೆ ನೀರಿನ ಬಾಟಲಿ ಸೇರಿ ಹಲವು ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗುತ್ತಿದೆ. ಸ್ವತಃ ಅವರ ಕಾರ್ಯಕರ್ತರೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಈವರೆಗೂ ದುರಂತದಲ್ಲಿ 254 ಜನ ಸಾವನ್ನಪ್ಪಿದರೆ, 192 ಜನರು ನಾಪತ್ತೆಯಾಗಿದ್ದಾರೆ. 1,592 ಜನರನ್ನು ರಕ್ಷಣೆ ಮಾಡಿದ್ದು, 8 ಸಾವಿರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ 1,884 ಮಕ್ಕಳು, 23 ಗರ್ಭಿಣಿಯರು ಇದ್ದು, ಗುಡ್ಡ ಕುಸಿತದ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 31, 2024 10:41 PM