ವಯನಾಡ್ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 238; ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿ

ಕೇರಳದ ವಯನಾಡ್ ಜಿಲ್ಲೆಯ ಚೂರಲ್​​ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 200 ದಾಟಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಇದೀಗ ಮಳೆ ಅಡ್ಡಿಯಾಗಿದೆ. ದುರಂತ ಪ್ರದೇಶದಲ್ಲಿ ಸೇನೆ, ಪೊಲೀಸ್ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಅವರು ನಾಳೆ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.

ರಶ್ಮಿ ಕಲ್ಲಕಟ್ಟ
|

Updated on: Jul 31, 2024 | 7:41 PM

ಕೇರಳದ ವಯನಾಡು ಜಿಲ್ಲೆಯ ಚೂರಲ್ ಮಲ ಮತ್ತು ಮುಂಡಕೈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 238 ಕ್ಕೆ ತಲುಪಿದೆ. ಸರ್ಕಾರ ಅಧಿಕೃತವಾಗಿ 143 ಸಾವುಗಳನ್ನು ದೃಢಪಡಿಸಿದೆ. ಈ ಪೈಕಿ 75 ಜನರನ್ನು ಗುರುತಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡಕೈಯಲ್ಲಿ ಭಾರೀ ಮಳೆಯಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ.

1 / 13
ಮುಂಡಕೈ ನದಿಯಲ್ಲಿ ಪ್ರವಾಹ ಜೋರಾದರೂ ಸೇನೆ ಸೇತುವೆ ಕಾಮಗಾರಿ ಮುಂದುವರೆಸಿದೆ. ಕಳೆದ ದಿನ ಸೇನೆ ಸಿದ್ಧಪಡಿಸಿದ್ದ ಕಾಲುಸಂಕವೂ ಮುಳುಗಡೆಯಾಗಿತ್ತು. ಮಳೆಯಲ್ಲೂ ಯಾಂತ್ರೀಕೃತ ಹುಡುಕಾಟ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ತಂದಿರುವ ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಮನೆಗಳ ಅವಶೇಷಗಳು ಮತ್ತು ಮಣ್ಣನ್ನು ಸ್ಥಳಾಂತರಿಸುವ ಮೂಲಕ ಶೋಧ ನಡೆಸಲಾಯಿತು. ಬೆಳಗ್ಗೆ ಇಲ್ಲಿ ಸೈನಿಕರು ತಪಾಸಣೆ ನಡೆಸಿದರೂ ಸಂಪೂರ್ಣವಾಗಿ ಅವಶೇಷಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ.

2 / 13
ಭಾರೀ ಮಳೆ ಮತ್ತು ಜಲಾವೃತದಿಂದಾಗಿ, ಕುನ್ನಂಕುಲಂ - ತ್ರಿಶೂರ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಚೂಂಡಲ್‌ನಿಂದ ತ್ರಿಶೂರ್ ಶೋಭಾ ಸಿಟಿವರೆಗೆ ಸಂಚಾರ ನಿಷೇಧಿಸಲಾಗಿತ್ತು. ಕೆಲವೆಡೆ ರಸ್ತೆ ಕುಸಿಯುತ್ತಿದ್ದು, ಮುಂದಿನ ಸೂಚನೆ ಬರುವವರೆಗೂ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾರ್ಗದ ಮೂಲಕ ಪ್ರಯಾಣಿಸಬೇಕಾದವರು ಇತರ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣ ಮುಂದುವರಿಸಲು ಸೂಚಿಸಲಾಗಿದೆ.

3 / 13
ಚಾಲಿಯಾರ್ ನದಿಯಲ್ಲಿ ಇಂದಿನ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ನಾಳೆ(ಗುರುವಾರ) ಬೆಳಗ್ಗೆ ಶೋಧ ಕಾರ್ಯ ಪುನರಾರಂಭವಾಗಲಿದೆ. ಮಲಪ್ಪುರಂನ ವಾಳಕ್ಕಾಡ್‌ನ ಮಣ್ಣಂತ್ತಲ ಕಣಿವೆಯಿಂದ ಮಗುವಿನ ಮೃತದೇಹ ಪತ್ತೆಯಾಗಿದೆ.

4 / 13
ಪೂನೂರು ನದಿ ಉಕ್ಕಿ ಹರಿದಿದ್ದು, ಕಾರಂತೂರು ಏಟ್ಟಕುಂಡ್,  ಪಾರಕ್ಕಡವ್ ಮತ್ತು ಮಂಡಾಳಿಲ್ ಭಾಗದಲ್ಲಿ ಸುಮಾರು 500 ಮನೆಗಳಿಗೆ ನೀರು ನುಗ್ಗಿದೆ. ಕುನ್ನಮಂಗಲಂ ವೆಲ್ಲೂರು ಮತ್ತು ತಾಳಿಕ್ಕುಂಡ್ ಪಂಡರಪರಂ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಬೆಳಗ್ಗೆಯಿಂದ 2 ಅಡಿ ನೀರು ಕಡಿಮೆಯಾದರೂ ಸಂಜೆಯವರೆಗೂ ನೀರು ಹರಿದು ಹೋಗದ ಕಾರಣ ಬಹುತೇಕ ಮನೆಗಳನ್ನು ಸ್ವಚ್ಛಗೊಳಿಸಿಲ್ಲ. ಚಾತಮಂಗಲಂ ಮತ್ತು ಕುನ್ನಮಂಗಲಂ ಪಂಚಾಯಿತಿಗಳಲ್ಲಿ 13 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.

5 / 13
ರಕ್ಷಣಾ ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲು ಸಚಿವರ ತಂಡವು ಪ್ರಸ್ತುತ ವಯನಾಡ್‌ನಲ್ಲಿದೆ. ಸಚಿವರಾದ ಎ.ಕೆ. ಸಸೀಂದ್ರನ್, ರಾಮಚಂದ್ರನ್ ಕಡನಪಲ್ಲಿ, ಕೆ.ರಾಜನ್, ಮೊಹಮ್ಮದ್ ರಿಯಾಜ್, ಓ.ಆರ್. ಕೇಳು ಮಂಗಳವಾರದಿಂದ ವಯನಾಡಿನಲ್ಲಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೂಡ ಇಂದು ವಯನಾಡ್ ತಲುಪಿದ್ದಾರೆ

6 / 13
ವಯನಾಡಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. 210 ಸೈನಿಕರು ಐದು ಗುಂಪುಗಳಲ್ಲಿ ಸ್ಥಳಕ್ಕೆ ಬಂದಿದ್ದು, ಮಣ್ಣಿನಡಿಯಲ್ಲಿ  ಸಿಲುಕಿರುವವರ ಪತ್ತೆಗೆ ದೆಹಲಿಯಿಂದ ಸ್ನಿಫರ್ ಡಾಗ್‌ಗಳನ್ನು ತರಿಸಲಾಗಿದೆ. ಟೆಟ್ರಾ ಟ್ರಕ್‌ಗಳನ್ನು ವಯನಾಡಿಗೆ ತಲುಪಿಸಲಾಗುವುದು ಎಂದು ಸೇನೆಯು ಮಾಹಿತಿ ನೀಡಿದೆ.

7 / 13
ಮುಂಡಕೈಗೆ ಬಂದ ಸಚಿವರಿಗೆ ಸ್ಥಳೀಯ ನಿವಾಸಿಗಳು ಅವಾಜ್ ಹಾಕಿದ್ದಾರೆ. ಮೆಪ್ಪಾಡಿಯಿಂದ ದುರಂತ ನಡೆದ ಸ್ಥಳಕ್ಕೆ ವಾಹನಗಳನ್ನು  ಬಿಡುತ್ತಿಲ್ಲ ಎಂಬ ಆರೋಪದ ಮೇಲೆ ವಾಗ್ವಾದ ನಡೆದಿದೆ. ಊಟದ ಗಾಡಿಗಳನ್ನೂ ಪೊಲೀಸರು ತಡೆದರು ಎಂದು ಸ್ಥಳೀಯರು ಹೇಳಿದ್ದಾರೆ

8 / 13
ಭೂಕುಸಿತದಿಂದ ದುರಂತ ಪ್ರದೇಶವಾಗಿ ಮಾರ್ಪಟ್ಟಿರುವ ವಯನಾಡ್ ಗೆ ಭೇಟಿ ನೀಡಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರಂನಿಂದ ಹೊರಟಿದ್ದಾರೆ. ವಯನಾಡ್ ದುರಂತದ ಹಿನ್ನೆಲೆಯಲ್ಲಿ ಬೆಳಗ್ಗೆ ತುರ್ತು ಸಚಿವ ಸಂಪುಟ ಸಭೆ ನಡೆಯಿತು. ಇದಾದ ಬಳಿಕ ಮುಖ್ಯಮಂತ್ರಿಗಳು ಅಧಿಕಾರಿಗಳ ವಿಶೇಷ ಸಭೆಯಲ್ಲಿ ಪಾಲ್ಗೊಂಡು ವಯನಾಡಿಗೆ ಮರಳಿದರು.  ಮುಖ್ಯಮಂತ್ರಿಯವರು ರಾತ್ರಿ ಕೋಝಿಕ್ಕೋಡ್ ತಲುಪಲಿದ್ದು, ಗುರುವಾರ ವಯನಾಡ್ ತಲುಪಲಿದ್ದಾರೆ. ಮುಖ್ಯಮಂತ್ರಿಗಳು ಗುರುವಾರ ವಿಪತ್ತು ಸಂತ್ರಸ್ತರು ತಂಗಿರುವ ಶಿಬಿರಗಳು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ.

9 / 13
ಹವಾಮಾನ ಇಲಾಖೆ ಪ್ರಕಾರ ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆ ಇದೆ. ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಲಕ್ಷದ್ವೀಪ, ಕರ್ನಾಟಕ ಮತ್ತು ತಮಿಳುನಾಡು ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆಯಿರುವುದರಿಂದ ಅಲೆಗಳ ಎಚ್ಚರಿಕೆಯನ್ನೂ ನೀಡಲಾಗಿದೆ

10 / 13
ಕೇರಳದಲ್ಲಿ ಆಗಸ್ಟ್ 3ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಮಲಪ್ಪುರಂ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಡುಕ್ಕಿ, ತ್ರಿಶೂರ್‌, ಎರ್ನಾಕುಲಂ ಮತ್ತು ಪಾಲಕ್ಕಾಡ್‌ ಹಳದಿ ಅಲರ್ಟ್‌ನಲ್ಲಿದೆ. ಗುರುವಾರ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

11 / 13
ರಾಜ್ಯದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಏಳು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ವಯನಾಡ್, ಮಲಪ್ಪುರಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಣ್ಣೂರು ಜಿಲ್ಲೆಯ ಅಂಗನವಾಡಿಗಳು, ವೃತ್ತಿಪರ ಕಾಲೇಜುಗಳು ಮತ್ತು ಟ್ಯೂಷನ್ ತರಗತಿಗಳು ನಾಳೆ ಮುಚ್ಚಲ್ಪಡುತ್ತವೆ. ಈ ಹಿಂದೆ ನಿಗದಿಯಾಗಿದ್ದ ಸಾರ್ವಜನಿಕ ಪರೀಕ್ಷೆಗಳು ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪೂರ್ವ ಘೋಷಿತ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ

12 / 13
ಭೂಕುಸಿತದ ಹಿನ್ನೆಲೆಯಲ್ಲಿ ಗುರುವಾರ 11.30ಕ್ಕೆ ಸರ್ವಪಕ್ಷ ಸಭೆ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ತುರ್ತು ನಿಧಿಯನ್ನು ನಂತರ ನಿರ್ಧರಿಸಲಾಗುವುದು. ವಯನಾಡಿನಲ್ಲಿ 9 ಮಂದಿ ಸಚಿವರಿದ್ದಾರೆ. ಎರಡು ತಂಡಗಳಲ್ಲಿ ಕೆಲಸವನ್ನು ಸಮನ್ವಯಗೊಳಿಸಲಾಗುವುದು. ನಿಯಂತ್ರಣ ಕೊಠಡಿಗಳಲ್ಲಿ ಹಾಜರಿರುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ವಿಧಿವಿಜ್ಞಾನ ವೈದ್ಯರನ್ನು ನೇಮಿಸಲು ಸಚಿವ ಸಂಪುಟ ನಿರ್ಧರಿಸಿದೆ.

13 / 13
Follow us