ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಕತ್ತಿಗೆ ಜಾರಕಿಹೊಳಿ ಟಾಂಗ್

Edited By:

Updated on: Jul 20, 2025 | 12:21 PM

ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ‌ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ‌ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ ಎಂದರು.

ಬೆಳಗಾವಿ, ಜುಲೈ 20): ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿಯಲ್ಲಿ ಜೋರಾಯ್ತು ಕತ್ತಿ ಮತ್ತು ಜಾರಕಿಹೊಳಿ‌ ಕುಟುಂಬದ ನಡುವಿನ ಫೈಟ್ ಜೋರಾಗಿದೆ. ಇದರ ಬೆನ್ನಲ್ಲೇ ಹುಕ್ಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದು, ನಿಡಸೋಶಿ ಮಠಕ್ಕೆ ‌ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಯ ಬಂದಾಗ ನಾವು ಕುಸ್ತಿ ಆಡುತ್ತೇವೆ. ಕುಸ್ತಿ ಅಖಾಡ ಇನ್ನೂ ದೂರವಿದೆ. ನಮಗೆ ಅವಸರವಿಲ್ಲ. ಅವರಿಗೆ ಅರ್ಜೆಂಟ್​ ಇರಬಹುದು, ನಮಗೆ ಅರ್ಜೆಂಟ್ ಇಲ್ಲ. ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಪ್ರಾಕ್ಟಿಕಲ್ ಬೇರೆ ಥಿಯರಿ ಬೇರೆ‌. ಚಿತ್ರದುರ್ಗದಲ್ಲಿ ಐದು ಲಕ್ಷ ಜನರನ್ನು ನಾವು ಸೇರಿಸಿದ್ದೇವೆ. ಇಲ್ಲಿ 2 ಸಾವಿರ ಜನರನ್ನು ಸೇರಿಸಿದ್ದರೆ ಸಾಕು. ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ ಎಂದು ಕತ್ತಿ ಕುಟುಂಬಕ್ಕೆ ಟಾಂಗ್ ಕೊಟ್ಟರು.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More