‘ನಾವು ಹಳ್ಳಿಯವರೇ ಏನಿವಾಗ?’: ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​

Edited By:

Updated on: Nov 05, 2026 | 12:06 PM

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ 'ಹಳ್ಳಿಗುಗ್ಗು' ಹೇಳಿಕೆ ಖಂಡಿಸಿ 'ನಾವು ಹಳ್ಳಿಯವರೇ ಏನಿವಾಗ?' ಎಂಬ ಬರಹವುಳ್ಳ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಜೆಡಿಎಸ್ ತೀವ್ರ ಪ್ರತಿಭಟನೆಗೆ ಮುಂದಾಗಿದೆ. ಪ್ರಿಯಾಂಕ್ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೂ ಪ್ಲ್ಯಾನ್​ ನಡೆಸಿದೆ.

ಬೆಂಗಳೂರು, ನವೆಂಬರ್​​ 05: ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆ ಹಳ್ಳಿಗುಗ್ಗು ಎಂಬ ಪದ ಬಳಸಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನೇ ಈಗ ಜೆಡಿಎಸ್​​ ಅಸ್ತ್ರವಾಗಿಸಿಕೊಂಡಿದೆ. ಹೆಚ್​ಡಿಕೆ ವಿಲೇಜ್​ ಈಡಿಯಟ್​ ರೀತಿ ಆಡ್ತಾರೆ ಎಂದಿದ್ದ ಪ್ರಿಯಾಂಕ್ ಹೇಳಿಕೆಗೆ ಕೌಂಟರ್​​ ಆಗಿ ಬೆಂಗಳೂರಿನ ಹಲವೆಡೆ ‘ಗೃಹ ಸಚಿವರೇ ನಾವು ಹಳ್ಳಿಯವರೇ ಏನಿವಾಗ ಎಂದು’ ಜೆಡಿಎಸ್​​ ಫ್ಲೆಕ್ಸ್​​​​ ಜಾಹೀರಾತು ಹಾಕಿದೆ. ರಾಮನಗರ ತಾಲೂಕಿನ ಬಿಡದಿ ಫ್ಲೆಕ್ಸ್​​​​ ​​ ರಾರಾಜಿಸಿದ್ದು, ಪ್ರಿಯಾಂಕ್ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಹೋರಾಟಕ್ಕೂ ಪ್ಲ್ಯಾನ್​ ನಡೆಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Nov 05, 2026 12:05 PM
Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​