ಶಕ್ತಿ ಯೋಜನೆಯಿಂದ ಬಹಳ ಪ್ರಯೋಜನವಾಗುತ್ತಿದೆ ಎನ್ನುವ ಮಹಿಳೆ ಮತ್ತು ಕಿನ್ನರ್ ಸಮುದಾಯ
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ ಎಂದು ಮಹಿಳಾ ಪ್ರಯಾಣಿಕರು ಮತ್ತು ಕಿನ್ನರ್ ಸಮುದಾಯದವರು ಹೇಳುತ್ತಾರೆ. ಯೋಜನೆಯಿಂದ ತಮಗೆ ಮಾಸಿಕ ಕನಿಷ್ಠ ₹ 2,000-2,500 ಉಳಿಯುತ್ತಿದೆ ಎಂದು ಅವರು ಹೇಳುತ್ತಾರೆ. ಒಬ್ಬ ಮಹಿಳೆ ಚಾಮರಾಜಪೇಟೆಯಿಂದ ಗಾಂಧಿಜಜಾರ್ ಗೆ ಪ್ರಯಾಣಿಸುತ್ತಿದ್ದರೆ ಮತ್ತೊಬ್ಬರು ಬನಶಂಕರಿಯಿಂದ ಜೀವನಭೀಮಾನಗರದ ಕಡೆ ಹೋಗುತ್ತಿದ್ದಾರೆ.
ಬೆಂಗಳೂರು, ಜುಲೈ 14: ಕರ್ನಾಟಕ ಸರ್ಕಾರಕ್ಕೆ ಇವತ್ತು ಮಹತ್ವಪೂರ್ಣ ದಿನ ಎಂದರೆ ಅತಿಶಯೋಕ್ತಿ ಅನಿಸದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಕ್ತಿ ಯೋಜನೆಯನ್ನು ಆರಂಭಿಸಿ ಎರಡು ವರ್ಷ ಮೇಲಾಯಿತು. ಯೋಜನೆಯ ಪ್ರಯೋಜನ ಪಡೆದುಕೊಂಡಿರುವ ಮಹಿಳೆಯರು 500 ಕೋಟಿ ಸಲ ಉಚಿತವಾಗಿ ಬಿಎಂಟಿಸಿ, ಕೆಎಸ್ಆರ್ಟಿಸಿ ಮತ್ತು ಎನ್ಡಬ್ಲ್ಯೂಕೆಅರ್ಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದ ಈ ಬಸ್ಸಲ್ಲಿ ಸಾಂಕೇತಿವಾಗಿ 500 ನೇ ಕೋಟಿ ಟಿಕೆಟನ್ನು ಮಹಿಳಾ ಪ್ರಯಾಣಿಕರೊಬ್ಬರಿಗೆ ವಿತರಿಸಲಿದ್ದಾರೆ. ಉಚಿತ ಬಸ್ ಸೇವೆ ಮತ್ತು ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಸುಯೋಗ ನೆನೆದು ಪ್ರಯಾಣಿಕರು ತಮ್ಮ ಸಂತಸವನ್ನು ಟಿವಿ9ನೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮಾದರಿಯಲ್ಲೇ ಆಂಧ್ರದಲ್ಲೂ ಶಕ್ತಿ ಯೋಜನೆ ಜಾರಿಗೆ ಚಿಂತನೆ, ಬೆಂಗಳೂರಿನಲ್ಲಿ ಅಧ್ಯಯನ
ವಿಡಿಯೋ ಸುದ್ದಿಗಳಿಗಾಗು ಕ್ಲಿಕ್ ಮಾಡಿ
Published on: Jul 14, 2025 11:25 AM
