ಬಿಜೆಪಿಯವರು ಹಲಾಲ್ ಬಜೆಟ್ ಅಂತ ಹೇಳಲೇಬೇಕು, ಬೇರೇನು ಹೇಳಲು ಅವರಿಗೆ ಸಾಧ್ಯ? ಡಿಕೆ ಶಿವಕುಮಾರ್
ನೀರಾವರಿ ಇಲಾಖೆಗೆ ಕಡಿಮೆ ಅನುದಾನವೇನೂ ಸಿಕ್ಕಿಲ್ಲ, ಕಳೆದ ಸಲಕ್ಕಿಂತ ₹ 2,000 ಕೋಟಿ ಹೆಚ್ಚು ಹಣವನ್ನು ಸಿಎಂ ಸಿದ್ದರಾಮಯ್ಯ ಒದಗಿಸಿದ್ದಾರೆ, ಇಲಾಖೆಗೆ ಹಣಕಾಸಿನ ಕೊರತೆ ಎದುರಾಗುವ ನಿರೀಕ್ಷೆ ಇದೆ, ಅದಕ್ಕಾಗಿ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದ ಶಿವಕುಮಾರ್ ಬೆಂಗಳೂರು ವಿವಿಗೆ ಡಾ ಮನಮೋಹನ್ ಸಿಂಗ್ ಹೆಸರಿಟ್ಟಿದ್ದನ್ನು ಸಮರ್ಥಿಸಿಕೊಂಡರು.
ಬೆಂಗಳೂರು, ಮಾರ್ಚ್ 8: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ಬಜೆಟ್ ಅನ್ನು ಬಿಜೆಪಿಯವರು ಹಲಾಲ್ ಬಜೆಟ್ ಅನ್ನುವುದಾದರೆ ಅಂದುಕೊಳ್ಳಲಿ, ಅವರು ಹಾಗೆ ಹೇಳಲೇಬೇಕು, ಯಾಕೆಂದರೆ ಅವರು ಬಜೆಟ್ ನ ಕಣ್ಣಾರೆ ನೋಡಿದ್ದಾರೆ ಮತ್ತು ಕಿವಿಯಿಂದ ಕೇಳಿಸಿಕೊಂಡಿದ್ದಾರೆ, ಕಿವಿ, ಕಣ್ಣುಗಳಿಂದ ಸುಳ್ಳು ಹೇಳಲಾಗಲ್ಲ, ಬಾಯಿಂದ ಹೇಳಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು, ಅವರೇನೇ ಹೇಳಿದರೂ ಬೆಂಗಳೂರನ್ನು ತಮ್ಮ ಸರ್ಕಾರ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತದೆ ಎಂದು ಅವರು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget 2025; ಸಿದ್ದರಾಮಯ್ಯ ಒಂದು ಐತಿಹಾಸಿಕ ಮತ್ತು ಜನಪರ ಬಜೆಟ್ ಮಂಡಿಸಿದ್ದಾರೆ: ಡಿಕೆ ಶಿವಕುಮಾರ್