ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಅಂತ ಕುಮಾರಸ್ವಾಮಿಯನ್ನು ಕೇಳಬೇಕಿತ್ತೇ? ಚಲುವರಾಯಸ್ವಾಮಿ
ಶಿವಕುಮಾರ್ ಅವರನ್ನು ಭೇಟಿ ಹಿನ್ನೆಲೆ ಬಗ್ಗೆ ಕೇಳಿದಾಗ, ಅವರು ರಾಜ್ಯದ ಉಪ ಮುಖ್ಯಮಂತ್ರಿ, ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ಸಚಿವರು, ಬೆಂಗಳೂರು ನಗರಾಭವೃದ್ಧಿ ಸಚಿವರು ಮತ್ತು ನೀರಾವರಿ ಖಾತೆ ಸಚಿವರು ಕೂಡ ಹೌದು, ಅವರ ಬಳಿ ಏನಾದರೂ ಕೆಲಸ ಇದ್ದೇ ಇರುತ್ತದೆ, ಕೃಷಿ ಮತ್ತು ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆಲ ಕೆಲಸಗಳಿದ್ದವು, ಹಾಗಾಗಿ ಅವರನ್ನು ಕಾಣಲು ಬಂದಿದ್ದು ಎಂದು ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರು, ಆಗಸ್ಟ್ 29: ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮಾಡುತ್ತಿರುವ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿರುವುದನ್ನು ರಾಜ್ಯ ಕೃಚಿ ಸಚಿವ ಎನ್ ಚಲುವರಾಯಸ್ವಾಮಿ ಗಮನಕ್ಕೆ ತಂದಾಗ, ಜಾತಿಯನ್ನು ಮುಂದೆ ಮಾಡಿಕೊಂಡು ಯಾವ ಕೆಲಸವನ್ನೂ ಮಾಡಲಾಗಲ್ಲ, ದಸರಾ ಮಹೋತ್ಸವ ಯಾರಿಂದ ಉದ್ಘಾಟಿಸಬೇಕು ಅಂತ ಕುಮಾರಸ್ವಾಮಿಯವರನ್ನು ಕೇಳುತ್ತಾ ಕೂರಲಾಗಲ್ಲ, ಕುಮಾರಸ್ವಾಮಿ ಬಾಯಿ ಚಪಲಕ್ಕೆ ಮಾತಾಡುತ್ತಾರೋ ಮತ್ಯಾವುದಕ್ಕೆ ಮಾತಾಡುತ್ತಾರೋ ಗೊತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದ ಸಚಿವ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದ ರೈತ ರಾಜಣ್ಣ ಗೋಳು ಮಂಡ್ಯದಿಂದ ಆಚೆಬಾರದ ಕೃಷಿ ಸಚಿವ ಚಲುವರಾಯಸ್ವಾಮಿಗೆ ಕೇಳಿಸೀತೇ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ