ಸರ್ಕಾರದಲ್ಲಿರುವ ಗೊಂದಲ ಮತ್ತು ಪಕ್ಷಕ್ಕಾಗುತ್ತಿರುವ ಡ್ಯಾಮೇಜ್ ನಿವಾರಿಸಿ ಎಂದು ವರಿಷ್ಠರನ್ನು ಕೋರಿದ್ದೇವೆ: ತನ್ವೀರ್ ಸೇಟ್
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಹಸುಗಳ ಕೆಚ್ಚಲು ಕೊಯ್ದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಟ್, ಒಂದು ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ಹೆತ್ತ ತಾಯಿಗೆ ದ್ರೋಹ ಬಗೆದಂತೆ, ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬಿಜೆಪಿಯವರ ಪ್ರವೃತ್ತಿ, ತಪ್ಪಿತಸ್ಥನನ್ನು ಈಗಾಗಲೇ ಬಂಧಿಸಲಾಗಿದೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ಮೈಸೂರು: ಸಚಿವ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷನ ಜವಾಬ್ದಾರಿ ಒಟ್ಟಿಗೆ ನಿರ್ವಹಿಸಲು ಕಷ್ಟವಾಗುತ್ತದೆ, ಹಾಗಾಗಿ ಅಧ್ಯಕ್ಷನ ಸ್ಥಾನವನ್ನು ಬೇರೆಯವರಿಗೆ ನೀಡಬೇಕೆಂದು ಸಿಎಲ್ಪಿ ಸಭೆಯಲ್ಲಿ ನಡೆದಿರುವ ಚರ್ಚೆಗೆ ಉತ್ತರಸಿದ ಶಾಸಕ ತನ್ವೀರ್ ಸೇಟ್, ಪಕ್ಷದಿಂದ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷವಲ್ಲ, ಯಾವತ್ತಿಗೂ ಪಕ್ಷದ ಅಧೀನದಲ್ಲಿ ಸರ್ಕಾರ ನಡೆಯಬೇಕು, ಪಕ್ಷದಲ್ಲಿರುವ ಗೊಂದಲಗಳನ್ನು ನಿವಾರಿಸುವಂತೆ ಸಭೆಯಲ್ಲಿ ವರಿಷ್ಠರಿಗೆ ಹೇಳಿದ್ದೇವೆ, ಸದ್ಯದಲ್ಲೇ ಅವರು ತಮ್ಮ ತೀರ್ಮಾನವನ್ನು ತಿಳಿಸಲಿದ್ದಾರೆ ಎಂದು ಹೇಳಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ಸ್ಪಷ್ಟತೆ ಬಂದಾಗ ಸರ್ಕಾರದ ಮಟ್ಟದಲ್ಲಿರುವ ಗೊಂದಲಗಳ ನಿವಾರಣೆಯಾಗುತ್ತದೆ ಮತ್ತು ಪಕ್ಷಕ್ಕೆ ಡ್ಯಾಮೇಜ್ ಅಗುವುದು ತಪ್ಪುತ್ತದೆ ಎಂದು ತನ್ವೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿನ್ನರ್ ಮೀಟಿಂಗ್ಗಳ ಬಗ್ಗೆ ಪ್ರಶ್ನೆ ತೆಗೆದಿಕೊಳ್ಳಲಿಚ್ಛಿಸದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್