ವಕ್ಫ್ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ನಾವೆಲ್ಲ ಸೇರಿದ್ದು: ಪ್ರತಾಪ್ ಸಿಂಹ, ಮಾಜಿ ಸಂಸದ
ಯತ್ನಾಳ್ ಅವರ ತಂಡ ಸಭೆ ಸೇರಿದಾಗೆಲ್ಲ ಬಿಜೆಪಿಯ ರಾಜ್ಯ ನಾಯಕತ್ವದ ಬಗ್ಗೆ ಚರ್ಚೆ ಮಾಡುತ್ತೇವೆ ಅಂತ ಭಾವಿಸಬಾರದು, ತಮ್ಮ ಗುರಿ ವಕ್ಫ್ ನಿಂದ ರಾಜ್ಯದ ಯಾವ ರೈತನಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿದೆ, ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ತಾವೆಲ್ಲ ಸೇರಿದ್ದು, ನಾಯಕರು ಒಂದೆಡೆ ಸೇರಿದಾಗ ಊಟ ತಿಂಡಿ ಇದ್ದೇ ಇರುತ್ತದೆ, ಹಾಗಾಗಿ ಕಾಫಿ ಕುಡಿದು ಊಟ ಮಾಡಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಬೆಂಗಳೂರು: ನಗರದಲ್ಲಿರುವ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ಬಿಜೆಪಿ ರೆಬೆಲ್ಸ್ ಎಂದು ಕರೆಸಿಕೊಳ್ಳುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡ ಸಭೆಯನ್ನು ನಡೆಸಿದ ಬಳಿಕ ಮಾಜಿ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಕಳೆದ 6 ತಿಂಗಳಿಂದ ಯತ್ನಾಳ್ ಅವರ ನಾಯಕತ್ವದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಮತ್ತು ಅದರಲ್ಲಿ ಸಾಕಷ್ಟು ಯಶಸ್ಸು ಕೂಡ ಸಿಕ್ಕಿದೆ, ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶ್ರೀರಕ್ಷೆಯೊಂದಿಗೆ ಬಡರೈತರ ಭೂಮಿ, ಮಠಮಾನ್ಯಗಳ ಆಸ್ತಿಯನ್ನು ಕಬಳಿಸುವ ಕೆಲಸ ಮಾಡುತ್ತಿದ್ದಾರೆ, ವಕ್ಫ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಕಿಚ್ಚು ಹಚ್ಚಿದವರು ಯತ್ನಾಳ್; ಹಿಂದೆ ಸಚಿವರಾಗಿದ್ದಾಗ ಕುಮಾರ್ ಬಂಗಾರಪ್ಪನವರ ಕಮಿಟಿಯ ಸದಸ್ಯ ಕೂಡ ಆಗಿದ್ದರು, ಅವರ ಮಾರ್ಗದರ್ಶನದಲ್ಲಿ ಅಭಿಯಾನವನ್ನು ನಡೆಸಿ ಹೋರಾಟದ ವರದಿಯನ್ನು ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿದ್ದೇವೆ, ತಮ್ಮ ತಂಡ ಮಾಡಿದ ಕೆಲಸಕ್ಕೆ ಜೆಪಿಸಿಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಸ್ವಪಕ್ಷದ ಮುಖಂಡರು, ಉಚ್ಚಾಟನೆಗೆ ಪತ್ರ..!