Loading video

ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ಕಿರುಕುಳ ನೀಡಿದರೆ ಬೀದಿಗಿಳಿದು ಹೋರಾಟ: ಆರ್ ಅಶೋಕ

|

Updated on: Nov 29, 2024 | 6:37 PM

ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಸಂಪರ್ಕಿಸುವ ಪ್ರಯತ್ನ ತಾನು ಮಾಡುತ್ತಿರುವುದಾಗಿ ಹೇಳಿದ ಆಶೋಕ ಅವರು, ಅವರಿಗೆ ಕಿರುಕುಳ ನೀಡುವ ಕೆಲಸಕ್ಕೇನಾದರೂ ಪೊಲೀಸರು ಮುಂದಾದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದರು. ಮುಸಲ್ಮಾನರ ವಿರುದ್ಧ ನೀಡಿದ ಹೇಳಿಕೆಗೆ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರೂ ಪ್ರಕರಣ ದಾಖಲಾಗಿದೆ ಎಂದು ಅಶೋಕ ಹೇಳಿದರು.

ಬೆಂಗಳೂರು: ವಿಶ್ವ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್​ಐಅರ್ ದಾಖಲಾಗಿರುವುದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಸಯ್ಯದ್ ಅಬ್ಬಾಸ್ ಹೆಸರಿನ ವ್ಯಕ್ತಿ ನೀಡಿರುವ ದೂರಿನನ್ವಯ ಎಫ್ಐಅರ್ ಆಗಿದೆ, ಸಿದ್ದರಾಮಯ್ಯ ಸರ್ಕಾರಕ್ಕೆ ಮೊದಲಿಂದಲೂ ಹಿಂದೂಗಳನ್ನು ಕಂಡರೆ ಅಲರ್ಜಿ, ಒಕ್ಕಲಿಗ ಸ್ವಾಮೀಜಿಯನ್ನು ಎಫ್​ಐಆರ್ ಮೂಲಕ ಹೆದರಿಸಿ ಬೆದರಿಸಿ ದಬ್ಬಾಳಿಕೆ ನಡೆಸಲು ಮುಂದಾಗಿದ್ದಾರೆ, ಕೋರ್ಟ್ ಆದೇಶ ಪಾಲಿಸಲ್ಲ, ದೇಶದಲ್ಲಿರುವ ರಸ್ತೆಯೆಲ್ಲ ತಮ್ಮದೇ ಎನ್ನುವ ಮುಸ್ಲಿಂ ನಾಯಕನ ವಿರುದ್ಧ ಯಾಕೆ ಕೇಸ್ ದಾಖಲಾಗಿಲ್ಲ, ಹೈದರಾಬಾದ್ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವ ಅಸಾದುದ್ದೀನ್ ಒವೈಸಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅಶೋಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಬಾಣಂತಿಯರ ಸಾವು, ಸರ್ಕಾರದ ವಿರುದ್ಧ ಅಶೋಕ್​ ಆಕ್ರೋಶ