ಸೋನು ನಿಗಮ್​ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ

Updated By: Digi Tech Desk

Updated on: May 02, 2025 | 5:24 PM

ಸೋನು ನಿಗಮ್ ಅವರು ಈಗ ವಿವಾದಕ್ಕೆ ಕಾರಣರಾಗಿದ್ದಾರೆ. ಕನ್ನಡಿಗರ ಫೇವರಿಟ್ ಗಾಯಕ ಎನಿಸಿಕೊಂಡಿದ್ದ ಅವರು ಈಗ ಅವರಿಂದಲೇ ಟೀಕೆ ಎದುರಿಸುವಂತೆ ಆಗಿದೆ. ಅಷ್ಟಕ್ಕೂ ಅವರು ನೀಡಿದ ಹೇಳಿಕೆ ಏನು? ಅವರ ಮೇಲೆ ವಿವಾದದ ಹೊಗೆ ಹೊತ್ತಿಕೊಳ್ಳಲು ಕಾರಣ ಏನು ಎಂಬುದನ್ನು ನೋಡೋಣ.

ಸೋನು ನಿಗಮ್ (Sonu Nigam) ಅವರು ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯಿತು’ ಎಂದು ಹೇಳುವ ಮೂಲಕ ಅನಾವಶ್ಯಕ ವಿವಾದ ಮಾಡಿಕೊಂಡಿದ್ದಾರೆ. ಸೋನು ನಿಗಮ್ ಅವರು ಈ ರೀತಿಯ ಹೇಳಿಕೆ ನೀಡಿದ್ದು ಬೇರೆಲ್ಲೂ ಅಲ್ಲ, ಬೆಂಗಳೂರಿನ ಖಾಸಗಿ ಕಾಲೇಜ್ ಒಂದರ ಕಾರ್ಯಕ್ರಮದಲ್ಲಿ. ಸದ್ಯ ಗಾಯಕನ ಹೇಳಿಕೆಗೆ ಸಾಕಷ್ಟು ವಿರೋಧಗಳು ಬಂದಿವೆ. ಇದನ್ನು ಅವರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 02, 2025 11:38 AM