ಪ್ರತಾಪಸಿಂಹನ ಆಕ್ಷೇಪಣೆ ಮುಖ್ಯವಲ್ಲ, ಸಂವಿಧಾನವೇ ನಮಗೆ ಪರಮೋಚ್ಚ: ಡಾ ಹೆಚ್ ಸಿ ಮಹದೇವಪ್ಪ
ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಇಡೀ ದೇಶಕ್ಕೆ ಗೌರವ ಘನತೆ ತಂದಿದ್ದಾರೆ, ಅವರನ್ನು ಬಿಜೆಪಿ ನಾಯಕರು ಭಾರತೀಯ ನಾಗರಿಕಳನ್ನಾಗಿ ನೋಡುತ್ತಾರೆಯೇ ಅಥವಾ ಭಾರತೀಯರಿಂದ ಪ್ರತ್ಯೇಕಿಸುತ್ತಾರೆಯೇ? ಬಾನು ಅವರು ಕನ್ನಡ ಸಾಹಿತ್ಯ ಲೋಕ ಮತ್ತು ಕನ್ನಡ ಭಾಷೆಗೆ ಒಂದು ಪ್ರತಿಷ್ಠಿತ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ ಎಂದು ಮಹದೇವಪ್ಪ ಹೇಳಿದರು.
ಬೆಂಗಳೂರು, ಆಗಸ್ಟ್ 25: ಈ ಬಾರಿಯ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರಿಂದ ಉದ್ಘಾಟಿಸುತ್ತಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪಣೆ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಅವರು ಆಕ್ಷೇಪಣೆ ಎತ್ತಿದರೆ ಏನಂತೆ, ನಮಗೆ ಅವರಿವರು ಹೇಳಿದ್ದು ಮುಖ್ಯವಲ್ಲ, ಸಂವಿಧಾನ ಹೇಳೋದು ಮಾತ್ರ ಪರಮೋಚ್ಛ, ದಸರಾ ನಾಡಿನ ಸಾಂಸ್ಕೃತಿಕ ಜೀವನವನ್ನು ಅಭಿವ್ಯಕ್ತಿಗೊಳಿಸುವ ನಾಡಹಬ್ಬ, ದಸರೆಯನ್ನು ಎಲ್ಲ 140 ಕೋಟಿ ಭಾರತೀಯರು ಅಚರಿಸುತ್ತಾರೆ ಎಂದು ಹೇಳಿದರು. ರಾಜಕೀಯ ಪಕ್ಷಗಳು ಧರ್ಮದ ವಿಚಾರವನ್ನು ಚರ್ಚಿಸಲೇಬಾರದು, ಧರ್ಮದ ಆಚರಣೆಯು ಜನರ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಷಯವಾಗಿದೆ, ಸರ್ವರಿಗೂ ಸಮಬಾಳು ಸಮಪಾಲು ಎಂದು ಸಂವಿಧಾನ ಹೇಳುತ್ತದೆ ಎಂದು ಮಹದೇವಪ್ಪ ಹೇಳಿದರು.
ಇದನ್ನು ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

