Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್ ಬಿ ಐ ಪ್ಲಾಟಿನಂ ಡೆಪಾಸಿಟ್ಸ್ ಸ್ಕೀಮ್​ನಲ್ಲಿ ಠೇವಣಿ ಹೂಡಿ ಹೆಚ್ಚುವರಿ ಶೇಕಡಾ 0.15 ಬಡ್ಡಿ ಪಡೆಯಲು ಅವಕಾಶ

ಎಸ್ ಬಿ ಐ ಪ್ಲಾಟಿನಂ ಡೆಪಾಸಿಟ್ಸ್ ಸ್ಕೀಮ್​ನಲ್ಲಿ ಠೇವಣಿ ಹೂಡಿ ಹೆಚ್ಚುವರಿ ಶೇಕಡಾ 0.15 ಬಡ್ಡಿ ಪಡೆಯಲು ಅವಕಾಶ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2021 | 7:21 PM

ಸ್ಕೀಮಿನ ಅನ್ವಯ ಠೇವಣಿ ಹೂಡುವವರು 75 ದಿನ, 75 ವಾರ ಮತ್ತು 75 ತಿಂಗಳುಗಳ ಟರ್ಮ್ ಡಿಪಾಸಿಟ್ ಮೇಲೆ ಹೆಚ್ಚುವರಿ ಶೇಕಡಾ 0.15 ಬಡ್ಡಿ ಪಡೆಯಲಿದ್ದಾರೆ.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಹೊಸ ಡೆಪಾಸಿಟ್ ಸ್ಕೀಮನ್ನು ಲಾಂಚ್ ಮಾಡಿದ್ದು ಈ ಸ್ಕೀಮಿನಡಿಯಲ್ಲಿ ಠೇವಣಿ ಹೂಡಬಯಸುವರಿಗೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿಯನ್ನು ಅವರ ಠೇವಣಿಗಳ ಮೇಲೆ ನೀಡಲಿದೆ. ಈ ಡೆಪಾಸಿಟ್ ಸ್ಕೀಮಿಗೆ ಎಸ್ ಬಿ ಐ ಪ್ಲಾಟಿನಂ ಡೆಪಾಸಿಟ್ಸ್ ಎಂದು ಹೆಸರಿಡಲಾಗಿದ್ದು ಇದರ ಲಾಭವನ್ನು ಪಡೆದುಕೊಳ್ಳಲು ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ.

ಸ್ಕೀಮಿನ ಅನ್ವಯ ಠೇವಣಿ ಹೂಡುವವರು 75 ದಿನ, 75 ವಾರ ಮತ್ತು 75 ತಿಂಗಳುಗಳ ಟರ್ಮ್ ಡಿಪಾಸಿಟ್ ಮೇಲೆ ಹೆಚ್ಚುವರಿ ಶೇಕಡಾ 0.15 ಬಡ್ಡಿ ಪಡೆಯಲಿದ್ದಾರೆ. ಈ ವಿಶೇಷ ಸ್ಕೀಮಿನಡಿ ಹಣ ಡೆಪಾಸಿಟ್ ಮಾಡಲು ಇಚ್ಛೆಯುಳ್ಳವರು 75 ದಿನ, 525 ದಿನ ಇಲ್ಲವೇ 2,250 ದಿನಗಳ ಅವಧಿಗಳನ್ನು ಆರಿಸಿಕೊಳ್ಳಬಹುದು.

ಪ್ರಸ್ತುತವಾಗಿ 75 ದಿನಗಳ ಅವಧಿಗೆ ಬ್ಯಾಂಕ್ ಶೇಕಡಾ 3.90 ಬಡ್ಡಿ ನೀಡುತ್ತಿದೆ. ಹೊಸ ಸ್ಕೀಮಿನಡಿ ಠೇವಣಿದಾರರು ಶೇಕಡಾ 3.95 ಬಡ್ಡಿ ಪಡೆಯಲಿದ್ದಾರೆ. 525 ದಿನಗಳ ಅವಧಿಗೆ ಈಗಿನ ಶೇಕಡಾ 5 ರ ಬದಲಿಗೆ ಶೇಕಡಾ 5.10 ಬಡ್ಡಿ ಪಡೆಯಲಿದ್ದಾರೆ. ಹಾಗೆಯೇ 2,250 ದಿನಗಳ ಅವಧಿಗೆ ಪ್ರಸ್ತುತ ಶೇಕಡಾ 5.40 ಬದಲಿಗೆ ಶೇಕಡಾ 5.55 ಬಡ್ಡಿ ಪಡೆಯುತ್ತಾರೆ.

ಹಿರಿಯ ನಾಗರಿಕರು 75 ದಿನಗಳ ಅವಧಿಗೆ ಶೇಕಡಾ 4.40 ಬದಲಿಗೆ ಶೆಕಡಾ 4.45 ಮತ್ತು 525 ದಿನಗಳ ಅವಧಿಗೆ ಶೇಕಡಾ 5. 60 ಬಡ್ಡಿ ಪಡೆಯಲಿದ್ದಾರೆ, ಆದರೆ 2,250 ದಿನಗಳ ಆವಧಿಗೆ ಅವರಿಗೆ ಹೆಚ್ಚುವರಿ ಬಡ್ಡಿಯ ಲಾಭವನ್ನು ಬ್ಯಾಂಕ್ ನೀಡುತ್ತಿಲ್ಲ.

ಇದನ್ನೂ ಓದಿ: Russia Aircraft Crash: ರಷ್ಯಾದಲ್ಲಿ ಮಿಲಿಟರಿ ವಿಮಾನ ಪತನ; ಕೊನೆ ಕ್ಷಣದ ಶಾಕಿಂಗ್ ವಿಡಿಯೋ ಇಲ್ಲಿದೆ