ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತೇನೆ ಅಂದರೆ ಬೇರೆಯವರು ಏನು ಹೇಳಲು ಸಾಧ್ಯ? ಸತೀಶ್ ಜಾರಕಿಹೊಳಿ
ಮೊನ್ನೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ 5-ವರ್ಷ ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಅವರೇ ಹಾಗೆ ಹೇಳಿದರ ಮೇಲೆ ತಾವೇನೂ ಮಾತಾಡುವಂತಿಲ್ಲ ಎಂದರು. ಸಂಪುಟ ಪುನಾರಚನೆ ಬಗ್ಗೆ ಅವರು ಸ್ಪಷ್ಟವಾದ ಉತ್ತರ ನೀಡದೆ, ತಾನು ಮಂತ್ರಿಯಾಗಿ ಉಳಿದರೆ ಸಾಕು ಅಂತ ಅನಿಸುತ್ತಿದೆ ಎಂದರು.
ಬೆಂಗಳೂರು, 15 ಮಾರ್ಚ್ : ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಲೊಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ (Dinner party) ಭಾಗವಹಿಸಿದ್ದರ ಬಗ್ಗೆ ಮಾತಾಡುತ್ತಾ, ಅದರಲ್ಲಿ ಅಂಥ ವಿಶೇಷವೇನೂ ಇಲ್ಲ, ಕೆಪಿಸಿಸಿ ಅಧ್ಯಕ್ಷರು ಕರೆದಾಗ ಭಾಗವಹಿಸಲೇಬೇಕಾಗುತ್ತದೆ, ಬಿಜೆಪಿ ನಾಯಕರು ಹೇಳುವ ಮಾತುಗಳನ್ನು ನಂಬುವ ಅವಶ್ಯಕತೆ ಇಲ್ಲ, ಯಾಕೆಂದರೆ ಅವರು ಸಿದ್ದರಾಮಯ್ಯ ಎಷ್ಟುದಿನ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ, ಇವತ್ತೊಂದು ಹೇಳುತ್ತಾರೆ, ನಾಳೆ ಮತ್ತೊಂದು ಹೇಳುತ್ತಾರೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ: ಸತೀಶ್ ಜಾರಕಿಹೊಳಿ ಆಪ್ತೆಯ ಬಂಧನ