ಸಿಎಂ ಕುರ್ಚಿಗಾಗಿ ಒಪ್ಪಂದವಾಗಿಲ್ಲ ಎಂದು ಸಿಎಂ ಹೇಳಿದ್ದರೆ ಮುಗೀತು, ಅದೇ ಫೈನಲ್: ಶಿವಕುಮಾರ್

|

Updated on: Dec 04, 2024 | 4:46 PM

ಪ್ರಾಯಶಃ ಶಿವಕುಮಾರ್ ಅವರ ಈ ಧೋರಣೆಯೇ ಬಿಜೆಪಿ ನಾಯಕರಿಂದ ಪ್ರಶಂಸೆಗೊಳಗಾಗಿದೆ. ಸಿದ್ದರಾಮಯ್ಯ ವಿರುದ್ಧ ಅವರಿಗೆ ಎಷ್ಟೇ ಅಸಮಾಧಾನ, ಬೇಗುದಿ, ದುಗುಡು, ದುಮ್ಮಾನವಿದ್ದರೂ ಅದನ್ನು ಯಾವತ್ತೂ ಸಾರ್ವಜನಿಕವಾಗಿ ಹೊರಹಾಕುವುದಿಲ್ಲ. ಇದಕ್ಕೆ ತದ್ವಿರುದ್ಧವಾದ ಧೋರಣೆಯನ್ನು ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಪ್ರದರ್ಶಿಸುತ್ತಿದ್ದಾರೆ.

ಬೆಂಗಳೂರು: ಡಿಕೆ ಶಿವಕುಮಾರ್ ಮತ್ತು ತನ್ನ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಆಗಿಲ್ಲ, ಹೈಕಮಾಂಡ್ ಹೇಳಿದ್ದನ್ನು ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಸಿಎಂ ಹೇಳಿದ ಮೇಲೆ ಮುಗಿಯಿತು, ಅದಕ್ಕೆ ಎರಡು ಮಾತಿಲ್ಲ, ಚರ್ಚೆಯಿಲ್ಲ, ಅವರು ಹೇಳಿದ್ದೇ ಫೈನಲ್ ಎಂದರು. ಅಂದರೆ ನಿಮಗೆ ನೋವು ಸಹ ಇಲ್ಲ ಎಂದು ಪತ್ರಕರ್ತರೊಬ್ಬರು ಕೇಳಿದಾಗ ಮುಗುಳ್ನಗುತ್ತಾ ಉತ್ತರಿಸಿದ ಶಿವಕುಮಾರ್ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಿದ್ದೇನೆ ಎನ್ನುತ್ತಾ ಬೆನ್ನುಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಧಿಕಾರ ಹಂಚಿಕೆ ಒಪ್ಪಂದ: ಡಿಕೆ ಶಿವಕುಮಾರ್ ಹೇಳಿಕೆ ಅಲ್ಲಗಳೆದ ಸಿಎಂ ಸಿದ್ದರಾಮಯ್ಯ