ರಾಜ್ಯವನ್ನು ಲೂಟಿ ಮಾಡಿದವರೇ ನಿಶ್ಚಿಂತೆಯಿಂದ ಓಡಾಡುತ್ತಿರಬೇಕಾದರೆ ನಿರಪರಾಧಿಗಳಾದ ನಾವ್ಯಾಕೆ ಹೆದರೋಣ? ಡಾ ಕೆ ಸುಧಾಕರ್, ಬಿಜೆಪಿ ನಾಯಕ

ರಾಜ್ಯವನ್ನು ಲೂಟಿ ಮಾಡಿದವರೇ ನಿಶ್ಚಿಂತೆಯಿಂದ ಓಡಾಡುತ್ತಿರಬೇಕಾದರೆ ನಿರಪರಾಧಿಗಳಾದ ನಾವ್ಯಾಕೆ ಹೆದರೋಣ? ಡಾ ಕೆ ಸುಧಾಕರ್, ಬಿಜೆಪಿ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2023 | 5:39 PM

ಸರ್ಕಾರವನ್ನು ಲೂಟಿ ಮಾಡಿದವರೇ ನಿರ್ಭಯದಿಂದ ಓಡುತ್ತಿರಬೇಕಾದರೆ ಏನೂ ಮಾಡದ ನಾವು ಯಾರಿಗ್ಯಾಕೆ ಹೆದರಬೇಕು ಎಂದು ಹೇಳಿದರು. ನಾವು ಜನರ ಬಳಿಗೆ ಹೋಗೋಣ, ಸರ್ಕಾರವೆಸಗಿರುವ ಪ್ರಮಾದಗಳನ್ನು ಅವರಿಗೆ ತಿಳಿಸಿ ಕಾಂಗ್ರೆಸ್ ಅದನ್ನು ಕಿತ್ತೊಗೆಯೋಣ ಅಂತ ಸುಧಾಕರ್ ಹೇಳಿದರು. ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಸುಧಾಕರ್ ಬೆಂಬಲಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.

ಚಿಕ್ಕಬಳ್ಳಾಪುರ: ನಗರದಲ್ಲಿಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಬಿಜೆಪಿ ನಾಯಕ ಡಾ ಕೆ ಸುಧಾಕರ್ (Dr K Sudhakar) ತಮ್ಮೊಂದಿಗೆ ಅವರನ್ನು ಸಹ ಹುರಿದುಂಬಿಸುವ ಪ್ರಯತ್ನ ಮಾಡಿದರು. ಆದರೆ, ಚುನಾವಣೆಗಿಂತ (Assembly polls) ಮೊದಲು ಅವರ ನಡೆನುಡಿಯಲ್ಲಿ ಗೋಚರಿಸುತ್ತಿದ್ದ ಆತ್ಮವಿಶ್ವಾಸ (confidence) ಈಗ ಕಾಣದಾಗಿದೆ. ಅವರ ಮಾತು ಮತ್ತು ನೋಟಗಳಲ್ಲಿ ಜೀವಂತಿಕೆ ಇಲ್ಲ. ಕೋವಿಡ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡಿಸುವ ಬಗ್ಗೆ ಸರ್ಕಾರ ಮಾತಾಡಿರುವುದು ಸುಧಾಕರ್ ಅವರನ್ನು ಅಧೀರಗೊಳಿಸಿರುವುದು ಸುಳ್ಳಲ್ಲ. ತಮ್ಮಲ್ಲಿ ಮತ್ತು ಬೆಂಬಲಿಗರಲ್ಲಿ ಧೈರ್ಯ ತುಂಬಲು ಅವರು; ಸರ್ಕಾರವನ್ನು ಲೂಟಿ ಮಾಡಿದವರೇ ನಿರ್ಭಯದಿಂದ ಓಡುತ್ತಿರಬೇಕಾದರೆ ಏನೂ ಮಾಡದ ನಾವು ಯಾರಿಗ್ಯಾಕೆ ಹೆದರಬೇಕು ಎಂದು ಹೇಳಿದರು. ನಾವು ಜನರ ಬಳಿಗೆ ಹೋಗೋಣ, ಸರ್ಕಾರವೆಸಗಿರುವ ಪ್ರಮಾದಗಳನ್ನು ಅವರಿಗೆ ತಿಳಿಸಿ ಕಾಂಗ್ರೆಸ್ ಅದನ್ನು ಕಿತ್ತೊಗೆಯೋಣ ಅಂತ ಸುಧಾಕರ್ ಹೇಳಿದರು. ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಸುಧಾಕರ್ ಬೆಂಬಲಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ