RCB Vs PBKS: ಚೇಸಿಂಗ್ ಇರಲಿ, ಡಿಫೆಂಡ್ ಮಾಡಿಕೊಳ್ಳೋದಿರಲಿ ಈ ಸಲ ಕಪ್ ನಮ್ದೇ ಅಂದ ಬೆಂಗಳೂರು ಬಾಯ್ಸ್

ಅರುಣ್​ ಕುಮಾರ್​ ಬೆಳ್ಳಿ

Updated on: Jun 03, 2025 | 8:39 PM

ಬೆಂಗಳೂರಿನ ಸುಮಾರು ಕ್ರಿಕೆಟ್ ಪ್ರೇಮಿಗಳು ಇವತ್ತು ಆರ್​ಸಿಬಿ ಜೆರ್ಸಿಗಳನ್ನು ಧರಿಸಿದ್ದಾರೆ. ಆ ಮೂಲಕ ತಂಡದೊಂದಿಗೆ ಸಾಲಿಡಾರಿಟಿ ಪ್ರದರ್ಶಿಸುವ ಪ್ರಯತ್ನ ಎಂದು ಅಭಿಮಾನಿಗಳು ಹೇಳುತ್ತಾರೆ. ಬೆಂಗಳೂರು ಬಾಯ್ಸ್​ ಗ್ರೂಪಿನ ಯುವಕರು ತಮ್ಮ ಕೈಯಲ್ಲಿ ಅರ್​ಸಿಬಿ ಧ್ವಜಗಳ ಜೊತೆ ಪುನೀತ್ ರಾಜ್​ಕುಮಾರ್ ಅವರ ಚಿತ್ರವಿರುವ ಧ್ವಜವೂ ಇದೆ. ಇವರೆಲ್ಲರ ಆಸೆ ಈಡೇರಲಿ, ರಾತ್ರಿ 11 ಗಂಟೆಗೆ ಅಪ್ಪು ಹೇಳಿರುವಂತೆಯೇ ಪಟಾಕಿ ಸಿಡಿಸಲಿ!

ಬೆಂಗಳೂರು, ಜೂನ್ 3: ದೂರದ ಅಹ್ಮದಾಬಾದ್​ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಫೈನಲ್ (Indian Premier League 2025 Final) ಪಂದ್ಯ ಶುರುವಾಗಿದೆ, ಇತ್ತ ಬೆಂಗಳೂರಲ್ಲಿ ಅರ್​ಸಿಬಿ ಗೆಲುವಿನ ಸೆಲಿಬ್ರೇಷನ್ ಶುರುವಾಗಿದೆ. ಬೆಂಗಳೂರಿನ ಅನೇಕ ಬಾರ್, ರೆಸ್ಟೋರಂಟ್, ಪಬ್ ಮತ್ತು ಮಾಲ್ ಗಳಲ್ಲಿ ಗ್ರಾಹಕರು ರೋಚಕ ಫೈನಲ್ ವೀಕ್ಷಿಸಲು ದೈತ್ಯ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ. ಚರ್ಚ್ ಸ್ಟ್ರೀಟ್​ನಲ್ಲಿ ಬೆಂಗಳೂರು ಸುತ್ತಮುತ್ತ ಪ್ರದೇಶನಗಳಿಂದ ಅಗಮಿಸಿರುವ ಯುವಕರು ಜೊತೆಗೂಡಿದ್ದಾರೆ. ತಮ್ಮ ಗ್ರೂಪ್​ಗೆ ಅವರು ಬೆಂಗಳೂರು ಬಾಯ್ಸ್ ಅಂತ ಹೆಸರಿಟ್ಟುಕೊಂಡಿದ್ದು ಎಲ್ಲರ ಬಾಯಲ್ಲೂ ಒಂದೇ ಮಾತು; ಚೇಸಿಂಗ್ ಇರಲಿ, ಡಿಫೆಂಡ್ ಮಾಡಿಕೊಳ್ಳೋದಿರಲಿ, ಈ ಸಲ ಕಪ್ ನಮ್ದೇ!

ಇದನ್ನೂ ಓದಿ:  ನಾ ನೋಡಿದ ಪಂದ್ಯದಲ್ಲಿ RCB ಸೋತೇ ಇಲ್ಲ: ಮಾಡೆಲ್ ಸೌಂದರ್ಯಾ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.