ರಾಮನಗರನಲ್ಲಿ ಬೆಲ್ಲದ ಆರತಿ ಬೆಳಗಿಸಿಕೊಂಡ ಶಿವಕುಮಾರ ತಟ್ಟೆಗೆ ಹಣ ಹಾಕಿದರು, ಸಿದ್ದರಾಮಯ್ಯ ನೋಡುತ್ತಾ ನಿಂತರು!

ರಾಮನಗರನಲ್ಲಿ ಬೆಲ್ಲದ ಆರತಿ ಬೆಳಗಿಸಿಕೊಂಡ ಶಿವಕುಮಾರ ತಟ್ಟೆಗೆ ಹಣ ಹಾಕಿದರು, ಸಿದ್ದರಾಮಯ್ಯ ನೋಡುತ್ತಾ ನಿಂತರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2022 | 7:46 PM

ಬುಧವಾರ ಕಾಂಗ್ರೆಸ್ ಪಾದಯಾತ್ರೆ ರಾಮನಗರದ ಮೂಲಕ ಹೊರಟಿತು. ರೇಷ್ಮೆ ನಗರದಲ್ಲಿ ಪಾದಯಾತ್ರೆಯ ಮುಂದಾಳತ್ವ ವಹಿಸಸಿರುವವರಿಗೆ ಅಂದರೆ ಶಿವಕುಮಾರ ಮತ್ತು ಸಿದ್ದರಾಮಯ್ಯನವರಿಗೆ ಮಹಿಳೆಯರು ಬೆಲ್ಲದ ಆರತಿ ಬೆಳಗಿದರು. ಸಾಮಾನ್ಯವಾಗಿ ಆರತಿ ಬೆಳಗಿದ ನಂತರ ಬೆಳಗಿಸಿಕೊಂಡವರು ಅರತಿ ತಟ್ಟೆಯಲ್ಲಿ ಹಣ ಹಾಕುತ್ತಾರೆ.

ಈ ವಿಡಿಯೋನಲ್ಲಿ ನಿಮಗೆ ವಿಶೇಷವಾದ್ದು ಏನಾದರೂ ಕಾಣುತ್ತಿದೆಯೇ? ಗಮನವಿಟ್ಟು ನೋಡಿ. ಗೊತ್ತಾಗಲಿಲ್ಲವೇ? ಪಾದಯಾತ್ರೆಯ ಮುಖಂಡತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಮುಖದ ಮೇಲೆ ಮಾಸ್ಕ್ ಕೊನೆಗೂ ಕಾಣಿಸಿಕೊಂಡಿದೆ. ನಾವು ಪದೇಪದೆ ಎಲ್ಲ ವರದಿಗಳಲ್ಲಿ ಅವರು ಮಾಸ್ಕ್ ಧರಿಸದಿರುವುದನ್ನು ಉಲ್ಲೇಖಿಸಿದ ಕಾರಣವೋ, ಅಥವಾ ಖುದ್ದು ಅವರಿಗೆ ಜ್ಞಾನೋದಯವಾಯಿತೋ ಅಂತ ಗೊತ್ತಿಲ್ಲ ಮಾರಾಯ್ರೇ. ನಮಗೇನೂ ಅದರ ಶ್ರೇಯಸ್ಸು ಬೇಕಿಲ್ಲ. ಅವರು ಮಾಸ್ಕ್ ಧರಿಸದಿರುವುದರಿಂದ ಆಗುವ ಅನಾಹುತಗನ್ನು ಹೈಲೈಟ್ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. We are happy that common sense has finally prevailed!

ಓಕೆ ಬುಧವಾರ ಕಾಂಗ್ರೆಸ್ ಪಾದಯಾತ್ರೆ ರಾಮನಗರದ ಮೂಲಕ ಹೊರಟಿತು. ರೇಷ್ಮೆ ನಗರದಲ್ಲಿ ಪಾದಯಾತ್ರೆಯ ಮುಂದಾಳತ್ವ ವಹಿಸಸಿರುವವರಿಗೆ ಅಂದರೆ ಶಿವಕುಮಾರ ಮತ್ತು ಸಿದ್ದರಾಮಯ್ಯನವರಿಗೆ ಮಹಿಳೆಯರು ಬೆಲ್ಲದ ಆರತಿ ಬೆಳಗಿದರು. ಸಾಮಾನ್ಯವಾಗಿ ಆರತಿ ಬೆಳಗಿದ ನಂತರ ಬೆಳಗಿಸಿಕೊಂಡವರು ಅರತಿ ತಟ್ಟೆಯಲ್ಲಿ ಹಣ ಹಾಕುತ್ತಾರೆ.

ಶಿವಕುಮಾರ್ ಅವರು ತಮ್ಮ ಮುಂದಿದ್ದ ಅಥವಾ ಅವರ ಕೈಗೆ ನಿಲುಕುತ್ತಿದ್ದ ತಟ್ಟೆಗಳಿಗೆ ಹಣ ಹಾಕಿದರು. ಆದರೆ ಸರತಿಯಲ್ಲಿ ಹಿಂದೆ ಉಳಿದಿದ್ದ ಮಹಿಳೆಯರ ಆರತಿ ತಟ್ಟೆಗಳಿಗೆ ಹಣ ಬೀಳಲಿಲ್ಲ.

ಸಿದ್ದರಾಮಯ್ಯವವರು ಮಾತ್ರ ಆರತಿ ತಟ್ಟೆಗೆ ಕೈ ಮುಗುಯುತ್ತಾರೆಯೇ ಹೊರತು ಹಣ ಹಾಕುವುದಿಲ್ಲ. ಅವರ ಪರ್ಸಿನಲ್ಲಿ ಪ್ರಾಯಶಃ ಹಣ ಇರಲಿಲ್ಲ ಅನಿಸುತ್ತೆ. ಅಲ್ಲದೆ ಇಂಥ ಪಾದಯಾತ್ರೆಗಳಲ್ಲಿ ಪರ್ಸು ಮತ್ತು ಅದರಲ್ಲಿ ದುಡ್ಡು ಇಡುವುದು ಸಮಂಜಸಲ್ಲ. ಕಾರ್ಯಕರ್ತರ ಸೋಗಿನಲ್ಲಿ ಬರುವ ಪಿಕ್ ಪಾಕೆಟ್​​​ಗಳು ಪರ್ಸ್​​​ನ್ನು ಲಪಾಟಾಯಿಸಿಬಿಡುತ್ತಾರೆ.

ಇದನ್ನೂ ಓದಿ:   Viral Video: ಮಿನ್ನಲ್​ ಮುರಳಿ ಚಿತ್ರದ ಸೀನ್​ನಂತೆ ವಿಡಿಯೋ ಮಾಡಿ ಮದುವೆಗೆ ಆಮಂತ್ರಣ ನೀಡಿದ ಜೋಡಿ