ಮದ್ದೂರು ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ಸಚಿವನಿಗೆ ಮೃಷ್ಟಾನ್ನ ವಿದ್ಯಾರ್ಥಿಗಳಿಗೆ ಅನ್ನ ಸಾಂಬಾರ್!

|

Updated on: Aug 30, 2024 | 6:39 PM

ಶಿಕ್ಷಣ ಸಚಿವರೇ, ಒಂದೇ ಶಾಲೆಯ ಆವರಣದಲ್ಲಿ ಇಂಥ ಘೋರ ತಾರತಮ್ಯ? ಬೂಟಾಟಿಕೆ-ಅದೂ ಮಕ್ಕಳ ಊಟದ ವಿಷಯದಲ್ಲಿ ಸರಿಯಲ್ಲ ಸಚಿವರೇ! ಯಾವ ಪುರುಷಾರ್ಥಕ್ಕೆ ಈ ಫೋಟೋ ಆ್ಯಪ್? ನಿಮ್ಮ ಬಾಸ್ ಸಿದ್ದರಾಮಯ್ಯ ಸಹ ವಿದ್ಯಾರ್ಥಿಗಳ ಜೊತೆ ಆಗಾಗ ಊಟ ಮಾಡುತ್ತಾರೆ, ಆದರೆ ಮಕ್ಕಳ ತಟ್ಟೆಯಲ್ಲಿರೋದೆ ಅವರ ತಟ್ಟೆಯಲ್ಲಿರುತ್ತದೆ!

ಮಂಡ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿರುವ ಶಾಲೆಯೊಂದಕ್ಕೆ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಕೂತು ಮಧ್ಯಾಹ್ನದ ಬಿಸಿಯೂಟ ಸೇವಿಸಿದರು. ಅವರೊಂದಿಗೆ ಶಾಸಕರಾದ ರವಿಕುಮಾರ್ ಗಣಿಗ ಮತ್ತು ಕದಲೂರು ಉದಯ್ ಇದ್ದರು. ಸಚಿವರೊಂದಿಗೆ ಊಟಕ್ಕೆ ಕುಳಿತ ವಿದ್ಯಾರ್ಥಿನಿಯರ ಬಾಳೆ ಎಲೆಯಲ್ಲಿ ಗಣ್ಯರ ಎಲೆಯಲ್ಲಿರುವ ಆಹಾರ ಪದಾರ್ಥಗಳನ್ನು ಗಮನಿಸಬಹುದು. ಆದರೆ ಶಾಲೆಯ ಮತ್ತೊಂದು ಭಾಗದಲ್ಲಿ ಊಟ ಮಾಡುತ್ತಿರುವ ಬಾಲಕ ವಿದ್ಯಾರ್ಥಿಗಳ ಬಾಳೆಲೆಯಲ್ಲಿ ಕೇವಲ ಅನ್ನ ಮತ್ತು ಸಾಂಬಾರು ಮಾತ್ರ! ಅವರಿಗೆ ಮುದ್ದೆ, ಹಪ್ಪಳ, ಕೋಸಂಬರಿ ಪಲ್ಯಗಳ ಭಾಗ್ಯವಿಲ್ಲ! ಕೆಮೆರಾ ಕಣ್ಣಿಗೆ ಬೀಳಬಾರದು ಅಂತ ಬಡಪಾಯಿ ಬಾಲಕರು ಎಲೆಯ ಒಂದು ಭಾಗ ಎತ್ತಿ ಎಲೆಯಲ್ಲಿರೋದನ್ನು ಮುಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  25 ಸಾವಿರ ಪಿಯು ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ನೀಟ್​ ತರಬೇತಿ ಆರಂಭ: ಮಧು ಬಂಗಾರಪ್ಪ ಘೋಷಣೆ

Follow us on