ರವಿಯನ್ನು ಕಾಡಿನಲ್ಲಿ ಸುತ್ತಿಸುವಾಗ ಪಿಎಫ್ಐನವರು ದಾಳಿ ಮಾಡಿದ್ದರೆ ಅದಕ್ಕೆ ಹೊಣೆ ಯಾರಾಗುತ್ತಿದ್ದರು? ಅರ್ ಅಶೋಕ
ನಾವು ಪೊಲೀಸ್ ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಶಾಶ್ವತವಾಗಿ ಅಧಿಕಾರದಲ್ಲಿರೋದಾಗಿ ಭಾವಿಸಿರುವ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ, ಸರ್ಕಾರಕ್ಕೆ ಕೊಬ್ಬು ಮತ್ತು ದುರಹಂಕಾರ ಜಾಸ್ತಿಯಾಗಿದೆ, ಆದರೆ ಮುಂಬರುವ ದಿನಗಳಲ್ಲಿ ಸರ್ಕಾರ ಇದರ ಪ್ರತಿಫಲ ಉಣ್ಣಬೇಕಾಗುತ್ತದೆ, ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆ ಇಲ್ಲ ಎಂದು ಅಶೋಕ ಹೇಳಿದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಪಕ್ಷ ನಾಯಕ ಅರ್ ಅಶೋಕ,
ಪೊಲೀಸ್ ಠಾಣೆಯಲ್ಲಿ ಸಿಟಿ ರವಿಯವರ ಮೇಲೆ ಹಲ್ಲೆ ನಡೆದಿರುವುದನ್ನು ತೀವ್ರವಾಗಿ ಖಂಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಖುದ್ದು ರವಿಯವರೇ ತಮ್ಮನ್ನು ಕೊಲೆ ಮಾಡುವ ಪ್ರಯತ್ನ ನಡೆದಿದೆ ಅಂತ ಹೇಳಿದ್ದಾರೆ, ಯಾವುದೇ ವ್ಯಕ್ತಿಯನ್ನು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಡಿಸೋದು ಸಂವಿಧಾನ ಬದ್ಧ ಕ್ರಮ, ಅದನ್ನು ಬಿಟ್ಟು ಪೊಲೀಸರು ಯಾಕೆ ರವಿಯವರನ್ನು ಕಾಡಿನಲ್ಲಿ ಸುತ್ತಿಸಿದರು? ಅವರನ್ನು ಸುತ್ತಾಡಿಸುತ್ತಿದ್ದ ಜಾಡು ಹಿಡಿದು ಪೀಪಲ್ಸ್ ಫ್ರಂಟ್, ಕೆಎಫ್ಡಿ ಅಥವಾ ಕಾಂಗ್ರೆಸ್ ಪಕ್ಷದ ಸಹೋದದರಾಗಿರುವ ಕುಕ್ಕರ್ ಬ್ರ್ಯಾಂಡ್ ಉಗ್ರರು ದಾಳಿ ನಡೆಸಿದ್ದರೆ ಅದಕ್ಕೆ ಯಾರು ಹೊಣೆಯಾಗುತ್ತಿದ್ದರು? ಎಂದು ಅಶೋಕ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಬಂಧನ: ಠಾಣೆ ಬಳಿ ತಮ್ಮನ್ನು ತಡೆಯಲೆತ್ನಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡಿದ ಆರ್ ಅಶೋಕ
Published on: Dec 20, 2024 01:17 PM