ಕಾಂಗ್ರೆಸ್ ವರಿಷ್ಠರು ಯಾರನ್ನೇ ಸಿಎಂ ಮಾಡಿದರೂ ನನಗೆ ಸಂಬಂಧಿಸದ ವಿಷಯ: ಹೆಚ್ ಡಿ ರೇವಣ್ಣ

|

Updated on: Jun 28, 2024 | 7:08 PM

ಯಾರೇನೇ ಹೇಳಿದರೂ ಹೆಚ್ ಡಿ ದೇವೇಗೌಡರ ಹಿರಿಮಗ ರೇವಣ್ಣ ಗಟ್ಟಿಜೀವ. ತಮ್ಮ ಇಬ್ಬರು ಮಕ್ಕಳು ಗುರುತರವಾದ ಆರೋಪಗಳಲ್ಲಿ ಜೈಲಲ್ಲಿದ್ದರೂ ಅವರು ಧೃತಿಗೆಟ್ಟಿಲ್ಲ. ಮಾಧ್ಯಮದ ಪ್ರತಿನಿಧಿಗಳೊಂದಿಗೆ ಎಂದಿನಂತೆ ಮಾತಾಡುತ್ತಾರೆ. ಖುದ್ದು ರೇವಣ್ಣ ಮಹಿಳೆಯೊಬ್ಬರ ಅಪಹರಣದ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದಾರೆ.

ಬೆಂಗಳೂರು: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಹೆಚ್ ಡಿ ರೇವಣ್ಣ ಅವರು  ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಶ್ರೀಗಳು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಪಕ್ಷದ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೆ ಅನ್ನೋದು ನನಗೆ ಸಂಬಂಧಿಸದ ವಿಷಯ. ಕೆಎನ್ ರಾಜಣ್ಣ ಮೊದಲಾದವರೆಲ್ಲ ದೊಡ್ಡವರು, ಅವರು ನೀಡುವ ಹೇಳಿಕೆಗಳ ಪ್ರತಿಕ್ರಿಯೆ ನೀಡಲ್ಲ ಎಂದು ರೇವಣ್ಣ ಹೇಳಿದರು. ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಿರೋದು ಷಡ್ಯಂತ್ರವೋ ಅಲ್ಲವೋ ಅಂತ ತಾನು ಈಗ ಮಾತಾಡಲ್ಲ, ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ, ತನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ ಅಂತಲೂ ಹೇಳಲ್ಲ, ತನಗೆ ಕಾನೂನು ವ್ಯವಸ್ಥೆ ಮೇಲೆ ಭರವಸೆ ಇದೆ ಮತ್ತು ನ್ಯಾಯಾಂಗದ ಬಗ್ಗೆ ಗೌರವ ಇದೆ. ತನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾನೆ, ಎಂದು ರೇವಣ್ಣ ನಿರ್ವಿಕಾರಭಾವದಿಂದ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೊಕ್ಕಿರುವ ಹೆಚ್ ಡಿ ರೇವಣ್ಣ ಮಂದಿರದ ಬಳಿ ಟಿವಿ9 ವರದಿಗಾರನಿಗೆ ಏನೂ ಕೇಳಬೇಡಿ ಅಂದರು