AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ

ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ

ಮಾಲತೇಶ ಜಗ್ಗೀನ್
| Edited By: |

Updated on: Jun 20, 2024 | 10:37 PM

Share

‘ವಜ್ರೇಶ್ವರಿ ಕಂಬೈನ್ಸ್​’ ನಿರ್ಮಾಣದ ಸಿನಿಮಾದಲ್ಲಿ ದರ್ಶನ್​ ಅವರು ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದರು. ಆದ್ದರಿಂದ ದರ್ಶನ್​ಗೆ ಪಾರ್ವತಮ್ಮ ರಾಜ್​ಕುಮಾರ್​ ಅವರು ಒಂದು ಹೊಸ ಜವಾಬ್ದಾರಿ ನೀಡಲು ನಿರ್ಧರಿಸಿದ್ದರು. ಅದು ದರ್ಶನ್​ಗೆ ಇಷ್ಟ ಆಗಲಿಲ್ಲ. ಆ ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್​ ಕಾಸರಗೋಡು ಅವರು ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ್ದಾರೆ.

ನಟ ದರ್ಶನ್​ (Darshan) ಅವರು ಆರಂಭದಲ್ಲಿ ಕ್ಯಾಮೆರಾ ಸಹಾಯಕನಾಗಿ ಚಿತ್ರರಂಗದಲ್ಲಿ ಕೆಲಸ ಶುರು ಮಾಡಿದರು. ನಂತರ ಹೀರೋ ಆದರು. ವಜ್ರೇಶ್ವರಿ ಕಂಬೈನ್ಸ್​ ಸಂಸ್ಥೆಯ ಸಿನಿಮಾಗೆ ದರ್ಶನ್​ ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದಾಗ ಅವರಿಗೆ ಹೊಸ ಜವಾಬ್ದಾರಿ ನೀಡಲು ಪಾರ್ವತಮ್ಮ ರಾಜ್​ಕುಮಾರ್​ (Parvathamma Rajkumar) ನಿರ್ಧರಿಸಿದ್ದರು. ಆದರೆ ಅದನ್ನು ದರ್ಶನ್​ ಒಪ್ಪಲಿಲ್ಲ. ಅಲ್ಲದೇ ಪಾರ್ವತಮ್ಮ ಹೇಳಿದ್ದನ್ನು ಅವರು ಅವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ಆ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್​ ಕಾಸರಗೋಡು ಮಾತನಾಡಿದ್ದಾರೆ. ‘ದರ್ಶನ್​ಗೆ ಆರಂಭದ ದಿನಗಳಲ್ಲಿ ಈ ವಿಚಾರ ಹರ್ಟ್​ ಆಗಿತ್ತು. ರಕ್ಷಿತಾ ಅವರ ತಂದೆ ಗೌರಿಶಂಕರ್​ ಜೊತೆ ದರ್ಶನ್​ ಕ್ಯಾಮೆರಾ ಅಸಿಸ್ಟೆಂಟ್​ ಆಗಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಒಂದು ಹೊಸ ಕ್ಯಾಮೆರಾ ತರಿಸಿದ್ದರು. ನೀನು ಅದನ್ನು ನೋಡಿಕೋ ಎಂದು ದರ್ಶನ್​ಗೆ ಅವರು ಹೇಳಿದ್ದರು. ಅದು ದರ್ಶನ್​ಗೆ ಸಮಸ್ಯೆ ಆಯಿತು. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಪ್ರಮೋಟ್​ ಮಾಡುವ ಸಲುವಾಗಿ ನನ್ನನ್ನು ಟಿಕ್ನಿಕಲ್​ ವಿಭಾಗಕ್ಕೆ ಕಳಿಸುತ್ತಿದ್ದಾರೆ ಅಂತ ದರ್ಶನ್​ಗೆ ಬೇಸರವಾಯಿತು. ನನ್ನ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತಿದ್ದಾರೆ ಎನ್ನುವ ಭಾವನೆ ದರ್ಶನ್​ಗೆ ಬಂದಿದ್ದೇ ಅಲ್ಲಿಂದ’ ಎಂದು ಗಣೇಶ್​ ಕಾಸರಗೋಡು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಾಲತೇಶ ಜಗ್ಗೀನ್
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More