ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ: ಖಡಕ್ ಪ್ರಶ್ನೆಗಳಿಗೆ ಕಂಗಾಲಾದ ಸಿಬ್ಬಂದಿ ಗಪ್‌ಚುಪ್!
ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ವಿಚಾರವಾಗಿ ಬೈಕ್‌ನಲ್ಲಿ ಬಂದ ಯುವತಿ ಹಾಗೂ ಯುವಕ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ನಿಯಮದಂತೆ ರಸ್ತೆ ನಿರ್ಮಾಣವಾಗದೆ ಟೋಲ್ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸಿದ ಯುವತಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿಚಾರ ಉಲ್ಲೇಖಿಸಿ ಸಿಬ್ಬಂದಿಯನ್ನು ಗಪ್‌ಚುಪ್ ಮಾಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 07: ನೈಸ್ ರಸ್ತೆಯ ಟೋಲ್ ಸಂಗ್ರಹಣೆ ವಿಚಾರವಾಗಿ ಬೈಕ್‌ನಲ್ಲಿ ಬಂದ ಯುವಕ ಹಾಗೂ ಯುವತಿಯೊಬ್ಬರು ಟೋಲ್ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಇದು ನ್ಯಾಷನಲ್ ಹೈವೇ ಅಲ್ಲ, ಪ್ರೈವೇಟ್ ರಸ್ತೆ. 1250 ಕಿಲೋಮೀಟರ್ ರಸ್ತೆ ನಿರ್ಮಾಣ ಮುಗಿದ ಮೇಲಷ್ಟೇ ಟೋಲ್ ಸಂಗ್ರಹಿಸಬೇಕು, ಅದಕ್ಕೂ ಮುಂಚೆ ಸಂಗ್ರಹಿಸುವಂತಿಲ್ಲ” ಎಂದು ಯುವತಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿಯು “ಸರ್ಕಾರವನ್ನು ಕೇಳಿ” ಎಂದಾಗ, “ಹಣವನ್ನು ಸರ್ಕಾರದ ಬಳಿಯೇ ಪಡೆಯಿರಿ” ಎಂದು ಯುವತಿ ತಿರುಗೇಟು ನೀಡಿದ್ದಾರೆ.
ಅಲ್ಲದೆ, “ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಂದಾಗ ಗೇಟ್ ತೆರೆದು ಉಚಿತವಾಗಿ ಬಿಟ್ಟಿದ್ದೀರಲ್ಲ, ಸಚಿವರ ಕಾರು ಮಾತ್ರವಲ್ಲದೆ ಇಡೀ ದಿನ ಟೋಲ್ ಕಲೆಕ್ಟ್ ಮಾಡದೆ ಬಿಟ್ಟಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವತಿಯ ಖಡಕ್ ಪ್ರಶ್ನೆಗಳಿಗೆ ಟೋಲ್ ಸಿಬ್ಬಂದಿ ಉತ್ತರಿಸಲಾಗದೆ ಗಪ್‌ಚುಪ್ ಆಗಿದ್ದಾರೆ.
Video Credit: Social Media
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.