ಚಿಕ್ಕಮಗಳೂರಿನ ಮೂಡಿಗೆರೆ ಬಳಿ ಆಯೋಜಿಸಿದ ಕೆಸರುಗದ್ದೆ ಸ್ಪರ್ಧೆಗಳಲ್ಲಿ ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಂಡರು!

ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್ನಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಚಂದನ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೆಸರುಗದ್ದೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು

TV9kannada Web Team

| Edited By: Arun Belly

Jul 02, 2022 | 5:28 PM

ಮಲೆನಾಡಿನ (Malnad) ಊಟ ಚಂದ, ಜನ ಚಂದ, ಉಡುಗೆ-ತೊಡುಗೆ ಚಂದ, ಮಳೆ ಸುರಿಯುವ ವಾತಾವರಣ ಚಂದ ಮತ್ತು ಅವರ ಕೆಸರು ಗದ್ದೆ ಆಟಗಳೂ ಚಂದ ಮತ್ತು ರೋಚಕ. ಕಾಫಿನಾಡು ಚಿಕ್ಕಮಗಳೂರು (Chikmagalur) ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಹ್ಯಾಂಡ್ ಪೋಸ್ಟ್​ನಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ (Horticulture University) ಮತ್ತು ಚಂದನ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೆಸರುಗದ್ದೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪುರುಷರೊಂದಿಗೆ ಹಲವಾರು ಮಹಿಳೆಯರು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಇದನ್ನೂ ಓದಿ:  Viral Video: ರೆಸ್ಲರ್ ದಿ ಗ್ರೇಟ್ ಖಲಿ ಜೊತೆ ಕಬಡ್ಡಿ ಆಡಿ ಫಜೀತಿಗೆ ಸಿಲುಕಿದ ವ್ಯಕ್ತಿ! ವಿಡಿಯೋ ನೋಡಿ

Follow us on

Click on your DTH Provider to Add TV9 Kannada