ರಾಜೀನಾಮೆ ಸಲ್ಲಿಸಲು ರೆಡಿಯಾಗಿರುವವರ ಬಗ್ಗೆ ಕಾಮೆಂಟ್ ಮಾಡಲ್ಲ; ಹೈಕಮಾಂಡ್ ತೀರ್ಪಿಗೆ ಬದ್ಧ: ಕೆಹೆಚ್ ಮುನಿಯಪ್ಪ

|

Updated on: Mar 27, 2024 | 4:43 PM

ಕೋಲಾರ ಯಾವತ್ತಿಗೂ ಕಾಂಗ್ರೆಸ್ ಭದ್ರಕೋಟೆಯಾಗಿದೆ ಮತ್ತು ತಾನು 7 ಬಾರಿ ಸಂಸತ್ತಿಗೆ ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೇವಲ ಜಾಫರ್ ಶರೀಫ್ ಮತ್ತು ಬಿ ಶಂಕರಾನಂದ ಮಾತ್ರ ತನ್ನಂತೆ ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮುನಿಯಪ್ಪ ಹೇಳಿದರು.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ನಲ್ಲಿ ಈಗ ಸೃಷ್ಟಿಯಾಗಿರುವ ಅಹಿತಕರ ಪರಿಸ್ಥಿತಿಗೆ ಪ್ರಾಯಶಃ ಮೂಲ ಕಾರಣರಾಗಿರುವ ಸಚಿವ ಕೆಹೆಚ್ ಮುನಿಯಪ್ಪ (KH Muniyappa); ವಿಧಾನ ಪರಿಷತ್ ಸದಸ್ಯರು, ಸಚಿವ ಮತ್ತಿ ಶಾಸಕರ ರಾಜೀನಾಮೆ ಡ್ರಾಮಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡವಾಗ, ರಾಜೀನಾಮೆ ಸಲ್ಲಿಸಲು ಮುಂದಾಗಿರುವ ಡಾ ಎಂಸಿ ಸುಧಾಕರ್ (Dr MC Sudhakar) ಮತ್ತು ಬೇರೆ ನಾಯಕರ ಬಗ್ಗೆ ತಾನು ಕಾಮೆಂಟ್ ಮಾಡಲ್ಲ, ಆದರೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ (Kolar Lok Sabha seat) ಕಾಂಗ್ರೆಸ್ ಗೆಲ್ಲಲು ಉತ್ತಮ ಅವಕಾಶವಿದೆ, ಕೋಲಾರ ಯಾವತ್ತಿಗೂ ಕಾಂಗ್ರೆಸ್ ಭದ್ರಕೋಟೆಯಾಗಿದೆ ಮತ್ತು ತಾನು 7 ಬಾರಿ ಸಂಸತ್ತಿಗೆ ಆಯ್ಕೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೇವಲ ಜಾಫರ್ ಶರೀಫ್ ಮತ್ತು ಬಿ ಶಂಕರಾನಂದ ಮಾತ್ರ ತನ್ನಂತೆ ಏಳು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮುನಿಯಪ್ಪ ಹೇಳಿದರು.

ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂದು ತಾನು ಕೇಳಿಲ್ಲ, ಆ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು, ಇವತ್ತು ಬೆಳಗ್ಗೆ ಸಹ ತಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತಾಡಿದ್ದಾಗಿ ಸಚಿವ ಹೇಳಿದರು. ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಎರಡು ಎಡ ಮತ್ತು ಎರಡು ಬಲ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ನಡೆದುಕೊಂಡು ಬಂದಿರುವ ವಾಡಿಕೆಯಾಗಿದೆ, ಅದೆನೇ ಇದ್ದರೂ ತಾನು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮುನಿಯಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Lok Sabha Election: ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್​ ಅವರ ವಿಬಿಎ ಪಕ್ಷ ಏಕಾಂಗಿ ಹೋರಾಟ

Follow us on