ಹೊಸಕೋಟೆಯ ಶ್ರೀಗುರು ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ

Edited By:

Updated on: Jun 24, 2024 | 10:37 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕೆಇಬಿ ವೃತ್ತದ ಶ್ರೀಗುರು ನಳಪಾಕ ಹೋಟೆಲ್​ನಲ್ಲಿ ಖರೀದಿಸಿದ್ದ ಗೋಬಿ ಮಂಚೂರಿಯಲ್ಲಿ ಹುಳ ಪತ್ತೆ ಆಗಿರುವಂತಹ ಘಟನೆ ನಡೆದಿದೆ. 190 ರೂ. ಪಡೆದು ಹುಳವಿರುವ ಗೋಬಿ ಕೊಟ್ಟಿದ್ದೀರಾ ಅಂತ ಗ್ರಾಹಕ ಮಹಿಳೆ ಹೋಟೆಲ್​ನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಬಿ ಮಂಚೂರಿಯಲ್ಲಿ ಹುಳವಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.

ಬೆಂಗಳೂರು ಗ್ರಾಮಾಂತರ, ಜೂನ್​ 24: 190 ರೂ. ಹಣ ನೀಡಿ ಖರೀದಿಸಿದ ಗೋಬಿ ಮಂಚೂರಿಯಲ್ಲಿ (Gobi Manchurian) ಹುಳ ಪತ್ತೆಯಾಗಿದ್ದು, ಹುಳ (worm) ಕಂಡ ಗ್ರಾಹಕರು ಹೋಟೆಲ್ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕೆಇಬಿ ವೃತ್ತದ ಶ್ರೀಗುರು ನಳಪಾಕ ಹೋಟೆಲ್ ನಲ್ಲಿ ಘಟನೆ ನಡೆದಿದ್ದು ಮಹಿಳೆಯ ಕ್ಲಾಸ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಂದಹಾಗೆ ಇಂದು ಮಧ್ಯಾಹ್ನ ತೇಜಸ್ವಿನಿ ಅನ್ನೂ ಗ್ರಾಹಕರು ಕುಟುಂಬದ ಜೊತೆ ಹೋಟೆಲ್​ಗೆ ತೆರಳಿ ಗೋಬಿ ಮಂಚೂರಿ ಆರ್ಡರ್ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಕೊಟ್ಟ ಗೋಬಿಯನ್ನ ಮಗುವಿಗೆ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ಗೋಬಿ ಮಂಚೂರಿ ಒಳಗಡೆ ಹುಳವಿರುವುದು ಪತ್ತೆಯಾಗಿದ್ದು ಹೆಚ್ಚು ಹಣ ಪಡೆದು ಗುಣಮಟ್ಟದ ಗೋಬಿ ಮಂಚೂರಿ ಕೊಟ್ಟಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಪುಟ್ ಪಾತ್​ನಲ್ಲಿ ಕಡಿಮೆ ಬೆಲೆಗೆ ಗೋಬಿ ಮಂಚೂರಿ ಸಿಕ್ಕಿದ್ರು ಹೆಚ್ಚು ಹಣ ಕೊಟ್ಟು ಸ್ವಚ್ಚವಾಗಿರುತ್ತೆ ಅಂತ ಖರೀದಿಸಿದರೆ ಇಲ್ಲು ಇದೇ ಪರಿಸ್ಥಿತಿಯಾದ್ರೆ ಹೇಗೆ ಅಂತ ಹೋಟೆಲ್ ಸಿಬ್ಬಂದಿಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More